ಅಕ್ಕಿ ಬೇಯಿಸಿದ ನೀರು ಅಂದ್ರೆ ಬಸಿದ ನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ಗಳು ಇರೋದ್ರಿಂದ, ಆ ನೀರು ಕುಡಿದಾಗ ದೇಹಕ್ಕೆ ತ್ವರಿತವಾಗಿ ಶಕ್ತಿ ಸಿಗುತ್ತೆ. ಇದರಲ್ಲಿರೋ ಕೆಲವು ಅಂಶಗಳು ಕರುಳಿನ ಚಲನೆಯನ್ನು ಸುಧಾರಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಮಲಬದ್ಧತೆ ಸಮಸ್ಯೆ ಇದ್ದವರಿಗೆ ಇದು ಒಳ್ಳೆಯದು.
ಬೇಸಿಗೆಯಲ್ಲಿ ಇದು ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತೆ. ನೈಸರ್ಗಿಕವಾದ ಪಾನೀಯ ಇದಾಗಿರೋದ್ರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಅಕ್ಕಿ ನೀರಿನಲ್ಲಿರುವ ಪೋಷಕಾಂಶಗಳು ಚರ್ಮವನ್ನು ಮೃದುವಾಗಿಯೂ, ಕೂದಲನ್ನು ಹೊಳೆಯುವಂತೆಯೂ ಮಾಡುತ್ತವೆ ಅಂತಾರೆ. ಕೆಲವರು ಇದನ್ನು ಟೋನರ್ ಆಗಿಯೂ ಬಳಸುತ್ತಾರೆ.
ವಾಂತಿ ಅಥವಾ ಭೇದಿಯಾದಾಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತೆ. ಆಗ ಈ ನೀರು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಲವಣಾಂಶಗಳು ಸಿಕ್ಕು ನಿರ್ಜಲೀಕರಣವನ್ನ ತಡೆಯಬಹುದು. ಇದರಲ್ಲಿ ಸ್ವಲ್ಪ ಪ್ರಮಾಣದ ಅಮೈನೋ ಆಮ್ಲಗಳಿದ್ದು, ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗಬಹುದು. ಹಾಗಾಗಿ, ಅಕ್ಕಿ ಬೇಯಿಸಿದ ನೀರನ್ನು ಬಿಸಾಡದೆ ಕುಡಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.