ಹೊಸದಿಗಂತ ಡಿಜಿಟಲ್ ಡೆಸ್ಕ್:
30 ವರ್ಷದ ಮುಸ್ಲಿಂ ಮಹಿಳೆಯೊಬ್ಬರು 12ನೇ ತರಗತಿ ವಿದ್ಯಾರ್ಥಿಯ ಮದುವೆಯಾಗಲು ಹಿಂದು ಧರ್ಮಕ್ಕೆ ಮತಾಂತರವಸ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಸ್ಥಳೀಯ ದೇಗುಲದಲ್ಲಿ ಮೂರು ಮಕ್ಕಳ ತಾಯಿ ಶಬನಂ ಮತ್ತು 12ನೇ ತರಗತಿಯ ವಿದ್ಯಾರ್ಥಿ 18 ವರ್ಷದ ಯುವಕ ಶಿವ ಎಂಬಾತನನ್ನು ಮದುವೆಯಾಗಿದ್ದಾರೆ.
ಇನ್ನು ಈ ಮದುವೆಗೆ ಶಬನಂ ಪೋಷಕರು ಮತ್ತು ಗ್ರಾಮದ ಹಿರಿಯರು ಒಪ್ಪಿಗೆ ಕೂಡ ಸಿಕ್ಕಿದೆ.
ಇನ್ನು ಈ ಮದುವೆಗೂ ಮುನ್ನ ಮುಸ್ಲಿಂ ಮತಕ್ಕೆ ಸೇರಿದ್ದ ಶಬನಂರನ್ನು ಸ್ಥಳೀಯ ಅರ್ಚಕರು ಹಿಂದು ಧರ್ಮಕ್ಕೆ ಬರ ಮಾಡಿಕೊಂಡಿದ್ದಾರೆ. ಬಳಿಕ ಆಕೆಗೆ ಶಿವಾನಿ ಎಂದು ಮರು ನಾಮಕರಣ ಮಾಡಿ ಬಳಿಕ ಮದುವೆ ಮಾಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಸನ್ಪುರ ವೃತ್ತ ಅಧಿಕಾರಿ ದೀಪ್ ಕುಮಾರ್ ಪಂತ್ ಅವರು, ಅವರ ಪ್ರಕಾರ, ಶಿವಾನಿ ಎಂಬ ಮಹಿಳೆಯನ್ನು ಈ ಹಿಂದೆ ಶಬ್ನಮ್ ಎಂದು ಕರೆಯಲಾಗುತ್ತಿತ್ತು. ಆಕೆಯ ಪೋಷಕರು ಈಗ ಜೀವಂತವಾಗಿಲ್ಲ. ಆಕೆ ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದರು. ಇಬ್ಬರಿಂದಲೂ ವಿಚ್ಚೇದನ ಪಡೆದಿದ್ದಾರೆ ಎಂದು ಹೇಳಿದರು.
ಅಂತೆಯೇ ಪೊಲೀಸರು ಪ್ರಸ್ತುತ ವಿವಾಹದ ಸುತ್ತಲಿನ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ, ಆದರೆ ಇಲ್ಲಿಯವರೆಗೆ ಯಾವುದೇ ಕಾನೂನು ದೂರುಗಳು ದಾಖಲಾಗಿಲ್ಲ ಎಂದು ಹೇಳಿದರು.
ಇನ್ನು ಶಿವಾನಿ (ಶಬನಂ) ಮೊದಲು ಮೀರತ್ನಲ್ಲಿ ಒಬ್ಬ ವ್ಯಕ್ತಿಯನ್ನು ವಿವಾಹವಾಗಿದ್ದರು. ಆದರೆ ವಿವಾಹ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ನಂತರ ಅವರು 2011 ರಲ್ಲಿ ರಸ್ತೆ ಅಪಘಾತದಲ್ಲಿ ಅಂಗವಿಕಲರಾಗಿದ್ದ ಸೈದನ್ವಾಲಿ ಗ್ರಾಮದ ನಿವಾಸಿ ತೌಫಿಕ್ ಎಂಬುವವರನ್ನು ವಿವಾಹವಾಗಿದ್ದರು.
ಇದೀಗ12 ನೇ ತರಗತಿಯಲ್ಲಿ ಓದುತ್ತಿದ್ದ ಸುಮಾರು 18 ವರ್ಷ ವಯಸ್ಸಿನ ಹುಡುಗ ಶಿವ ಎಂಬಾತನೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಬಳಿಕ ಈ ವಿಚಾರ ಎಲ್ಲರಿಗೂ ತಿಳಿಯುತ್ತಲೇ ಆಕೆ ಕಳೆದ ವಾರ ಶುಕ್ರವಾರ ತನ್ನ 2ನೇ ಗಂಡ ತೌಫಿಕ್ನಿಂದ ವಿಚ್ಛೇದನ ಪಡೆದರು. ಬಳಿಕ ಮದುವೆಯಾಗಿದ್ದಾರೆ.