ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಯಿ ಸುದರ್ಶನ್ ಅರ್ಧಶತಕದ ಆಟದ ನೆರವಿನಿಂದ ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 217 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಇನ್ನಿಂಗ್ಸ್ ಆರಭಿಸಿದ ಗುಜರಾತ್ ಪರ ನಾಯಕ ಗಿಲ್(2) ವಿಕೆಟ್ ಕಳೆದುಕೊಂಡಿತು. ಬಳಿಕ ಎರಡನೇ ವಿಕೆಟ್ಗೆ ಸುದರ್ಶನ್ ಜೊತೆಯಾದ ಬಟ್ಲರ್ 80ರನ್ಗಳ ಜೊತೆಯಾಟ ನಡೆಸಿದರು. ಬಟ್ಲರ್ 25 ಎಸೆತಗಳಲ್ಲಿ 5 ಬೌಂಡರಿ ಸಹಿತ 36 ರನ್ಗಳಿಸಿ ತೀಕ್ಷಣ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ನಂತರ ಬಂದ ಶಾರುಖ್ ಖಾನ್ 20 ಎಸೆತಗಳಲ್ಲಿ 36 ರನ್ ಸಿಡಿಸಿದರು.
ಸುದರ್ಶನ್ 53 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ಗಳ ಸಹಿತ 82 ರನ್ಗಳಿಸಿ ಮತ್ತೊಮ್ಮೆ ದೊಡ್ಡ ಮೊತ್ತ ಪೇರಿಸಲು ಟೈಟನ್ಸ್ಗೆ ನೆರವಾದರು.
ಕೊನೆಯಲ್ಲಿ ಅಬ್ಬರಿಸಿದ ರಾಹುಲ್ ತೆವಾಟಿಯಾ 12 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ ಅಜೇಯ 24 ರನ್ಗಳಿಸಿದರು. ರುದರ್ಫೋರ್ಡ್ 7, ರಶೀದ್ ಖಾನ್ 12 ರನ್ಗಳಿಸಿದರು.