ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿಲೇಬಿ ಮೂಲಕ ದೇಶದ ವಿವಿಧೆಡೆಯ ಅಭಿಮಾನಿಗಳಿಗೆ ಕನ್ನಡ ಕಲಿಸುವ ಯೋಜನೆಯನ್ನು ಆರ್‌ಸಿಬಿ ಕೈಗೆತ್ತಿಗೊಂಡಿದೆ.
ಕನ್ನಡ ಅಕ್ಷರ ರೂಪದ ಜಿಲೇಬಿ ತಯಾರಿಸಿ, ಅದನ್ನು ಆಟಗಾರರು, ಅಭಿಮಾನಿಗಳಿಗೆ ನೀಡಿ ಪದಗಳ ಅರ್ಥಗಳನ್ನು ವಿವರಿಸಲಾಗುತ್ತದೆ. ಈಗಾಗಲೇ ಅಭಿಯಾನದ ಭಾಗವಾಗಿ ಕೆಲ ವಿಡಿಯೋಗಳನ್ನು ಫ್ರಾಂಚೈಸಿಯು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದೆ.
ಈ ಅಭಿಯಾನದಲ್ಲಿ, ವಿರಾಟ್ ಕೊಹ್ಲಿ, ಎಲೈಸಿ ಪೆರ್ರಿ, ದೇವ್‌ದತ್ ಪಡಿಕ್ಕಲ್ ಸೇರಿದಂತೆ ಫ್ರಾಂಚೈಸಿಯ ಪ್ರಮುಖ ಆಟಗಾರರು ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.
[email protected] ಇಮೇಲ್ ಮಾಡುವ ಮೂಲಕ ಕಲಿಕಾ ತರಗತಿಯಲ್ಲಿ ಪಾಲ್ಗೊಳ್ಳಬಹುದು. ಬೆಂಗಳೂರಿನ ಆರ್‌ಸಿಬಿ ಬಾರ್ ಮತ್ತು ಕೆಫೆಯಲ್ಲಿ ಏ.11ರವರೆಗೆ ಜಿಲೇಬಿ ಲಭ್ಯವಿ ಎಂದು ಫ್ರಾಂಚೈಸಿ ಹೇಳಿದೆ.