ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಹಾರ್ವರ್ಡ್ ಯೂನಿವರ್ಸಿಟಿಯ ಪಕ್ಕದಲ್ಲಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುತ್ತಿದ್ದ ಐಷಾರಾಮಿ ವೇಶ್ಯಾವಾಟಿಕೆ ಜಾಲವನ್ನು ಅಮೆರಿಕದ ಪೊಲೀಸರು ಬೇಧಿಸಿದ್ದಾರೆ.
ಈ ಕುರಿತು ವಿದೇಶಿ ಪತ್ರಿಕೆಯೊಂದು ವರದಿ ಮಾಡಿದ್ದು, ಲೈಂಗಿಕತೆಗೆ ಹಣ ನೀಡಿದ 30 ಕ್ಕೂ ಹೆಚ್ಚು ಪ್ರಮುಖ ಪುರುಷರ ಮಾಹಿತಿಯನ್ನು ಬಹಿರಂಗ ಪಡಿಸಲಾಗಿದೆ. ಅವರಲ್ಲಿ ಭಾರತೀಯ ಮೂಲದ ತ್ಯಾಜ್ಯನೀರಿನ ಸಂಸ್ಕರಣಾ ಸಂಸ್ಥೆಯಾದ ಗ್ರೇಡಿಯಂಟ್‌ನ ಸಿಇಒ ಅನುರಾಗ್ ಬಾಜ್‌ಪೇಯಿ ಕೂಡ ಒಬ್ಬರಾಗಿದ್ದಾರೆ.
2025 ರ ಆರಂಭದಲ್ಲಿ ನಡೆದ ಸ್ಟಿಂಗ್ ಆಪರೇಷನ್ ಸಂದರ್ಭದಲ್ಲಿ ಅನುರಾಗ್ ಬಾಜಪೇಯಿ ಅವರನ್ನು ಬಂಧಿಸಲಾಗಿತ್ತು. ಅವರು ಐಷಾರಾಮಿ ವೇಶ್ಯಾಗೃಹದಲ್ಲಿ ಲೈಂಗಿಕತೆಗೆ ಹಲವಾರು ಬಾರಿ ಹಣ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ.