ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ನಗರದಲ್ಲಿ ಮಾದಕ ದ್ರವ್ಯ ಜಾಲದ ಭೀಕರ ಮುಖವಾಡವನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಿಚ್ಚಿಟ್ಟಿದೆ. ಗುಜರಾತ್–ಕರ್ನಾಟಕ ಸಂಪರ್ಕ ಹೊಂದಿದ್ದ ಅಂತಾರಾಜ್ಯ ಡ್ರಗ್ಸ್ ಜಾಲದ ಮೇಲೆ ದಾಳಿ ನಡೆಸಿದ ಎನ್‌ಸಿಬಿ, 10 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳು, ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದೆ.
ಎನ್‌ಸಿಬಿ ಪ್ರಕಟಣೆಯಂತೆ, 35 ಕೆಜಿ ಮೆಫೆಡ್ರೋನ್ (ಎಂಡಿ), 1.8 ಕೆಜಿ ಅಫೀಮು, 25.6 ಲಕ್ಷ ರೂ. ನಗದು ಮತ್ತು ಟೊಯೋಟಾ ಫಾರ್ಚೂನರ್ ಎಸ್‌ಯುವಿಯನ್ನು ಜಪ್ತಿ ಮಾಡಲಾಗಿದೆ. ರಾಜಸ್ಥಾನದ ಜಾಲೋರ್ ಜಿಲ್ಲೆಯ ಮಹೇಂದ್ರ ಕುಮಾರ್ ವಿಷ್ಣೋಯ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಬಂಧನದ ಬಳಿಕ ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಫಿನಾಯಿಲ್ ಘಟಕದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುಪ್ತ ಡ್ರಗ್ಸ್ ಪ್ರಯೋಗಾಲಯದ ಮೇಲೆ ದಾಳಿ ನಡೆಸಿ, ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ರಾಸಾಯನಿಕಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:
ವಿಷ್ಣೋಯ್ ಎನ್‌ಡಿಪಿಎಸ್ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗಲೇ ಸಿಂಥಟಿಕ್ ಡ್ರಗ್ಸ್ ತಯಾರಿಕೆಯ ಜ್ಞಾನ ಪಡೆದು, ಜಾಮೀನಿನ ಬಳಿಕ 2024ರಲ್ಲಿ ಮೈಸೂರಿನಲ್ಲಿ ರಹಸ್ಯ ಘಟಕ ಸ್ಥಾಪಿಸಿದ್ದಾನೆ ಎಂದು ಎನ್‌ಸಿಬಿ ತಿಳಿಸಿದೆ.



