February 2, 2026
Monday, February 2, 2026
spot_img

ಬ್ರ್ಯಾಂಡ್ ಎಂಗೇಜ್‌ಮೆಂಟ್ ಕ್ಷೇತ್ರದಲ್ಲಿ ಹೊಸ ಇತಿಹಾಸ: ‘Dilfluencer Moments’ ಅನಾವರಣಗೊಳಿಸಿದ ‘Z’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಪ್ರಮುಖ ಕಂಟೆಂಟ್ ಮತ್ತು ತಂತ್ರಜ್ಞಾನ ಸಂಸ್ಥೆಯಾದ ‘Z’ ಜಾಹೀರಾತು ಮತ್ತು ಬ್ರ್ಯಾಂಡ್ ಎಂಗೇಜ್‌ಮೆಂಟ್ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಬಹು-ಸ್ಕ್ರೀನ್ ಬಳಕೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ, ಬ್ರ್ಯಾಂಡ್‌ಗಳು ಗ್ರಾಹಕರ ಗಮನ ಸೆಳೆಯುವ ಹಾಗೂ ಕ್ರಿಯೇಟಿವ್ ಕಟ್-ಥ್ರೂ ಒದಗಿಸಲು ‘Dilfluencer Moments’ ಎಂಬ ಹೊಸ ಓಮ್ನಿಚಾನಲ್ ರೀಚ್ ಪರಿಹಾರವನ್ನು ಸಂಸ್ಥೆ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಈ ಕುರಿತು ಜೀ ಎಂಟರ್ಟೈನ್ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಡ್ವರ್ಟೈಸ್ಮೆಂಟ್ ರೆವಿನ್ಯೂ, ಬ್ರಾಡ್‌ಕಾಸ್ಟ್ ಮತ್ತು ಡಿಜಿಟಲ್ ಮುಖ್ಯಸ್ಥೆ ಲಕ್ಷ್ಮಿ ಶೆಟ್ಟಿ ಮಾತನಾಡಿ ‘ಗ್ರಾಹಕರು ಅಡ್ಡಿಯಾಗುವ ಸಂವಹನದಿಂದ ದೂರ ಸರಿಯುತ್ತಿರುವ ಸಂದರ್ಭದಲ್ಲಿ, ಸಾಂಸ್ಕೃತಿಕವಾಗಿ ಹತ್ತಿರವಾಗುವ ಮತ್ತು ಭಾವನಾತ್ಮಕವಾಗಿ ನಂಬಿಕೆ ಮೂಡಿಸುವ ಕ್ಷಣಗಳು ಅತ್ಯಗತ್ಯ. ದಿಲ್‌ಫ್ಲುಯೆನ್ಸರ್ ಮೊಮೆಂಟ್ಸ್ ಪಾತ್ರ-ನೇತೃತ್ವದ ಕಂಟೆಂಟ್ ಸಿಸ್ಟಮ್ ಮೂಲಕ ಬ್ರಾಂಡ್‌ಗಳನ್ನು ವೈಯಕ್ತಿಕ ಮಟ್ಟದಲ್ಲಿ ಗ್ರಾಹಕರಿಗೆ ಸಂಪರ್ಕಿಸುತ್ತದೆ ಎಂದರು.

ಜೀ ಎಂಟರ್ಟೈನ್ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಕಾರ್ತಿಕ್ ಮಹಾದೇವ್ ಮಾತನಾಡಿ ‘ಇಂದಿನ ಜಾಹೀರಾತು ಜಗತ್ತಿನಲ್ಲಿ ‘ಲಭ್ಯತೆ’ ಮಾತ್ರ ಸಾಕಾಗುವುದಿಲ್ಲ ‘ಅರ್ಥ ಮಾಡಿಕೊಳ್ಳುವುದು’ ಮುಖ್ಯ ಎಂದು ಹೇಳಿದರು. ಚಿರಪರಿಚಿತ ಪಾತ್ರಗಳು, ಅನ್ವಯಿಸಬಹುದಾದ ಕಥೆಗಳು ಮತ್ತು ಎಲ್ಲ ಸ್ಕ್ರೀನ್‌ಗಳಲ್ಲಿ ಸಹಜವಾಗಿ ಹರಿಯುವ ಕ್ಷಣಗಳೇ ಬ್ರಾಂಡ್‌ಗಳನ್ನು ನೆನಪಿನಲ್ಲಿ ಉಳಿಸುತ್ತವೆ. ಅಲ್ಲಿಯೇ ದಿಲ್‌ಫ್ಲುಯೆನ್ಸರ್ ಮೊಮೆಂಟ್ಸ್ ನಿಜವಾದ ಸಂಚಲನ ಸೃಷ್ಟಿಸುತ್ತದೆ’ ಎಂದರು.

ಭಾರತದ ಜಾಹೀರಾತು ಕ್ಷೇತ್ರವು ವೇಗವಾಗಿ ರೂಪಾಂತರಗೊಳ್ಳುತ್ತಿದ್ದು, ಇಂದು ಯಾವುದೇ ಗಾತ್ರದ ಬ್ರ್ಯಾಂಡ್‌ಗಳಿಗೂ ಜಾಹೀರಾತು ಇನ್‌ವೆಂಟರಿಯನ್ನು ಸುಲಭವಾಗಿ ಖರೀದಿಸುವ ಅವಕಾಶ ದೊರಕಿದೆ. ಆದರೆ ಈ ಪ್ರಜಾಪ್ರಭುತ್ವೀಕರಣವೇ ವಿಸ್ತರಣೆ ಅಪಾರ ಪ್ರಮಾಣದ ಜಾಹೀರಾತು ಸಂದೇಶಗಳ ನಡುವೆ ಬ್ರಾಂಡ್‌ಗಳು ಎದ್ದು ಕಾಣುವುದು ಹೇಗೆ ಎಂಬ ಹೊಸ ಸವಾಲನ್ನು ತಂದಿದೆ.

ಈ ಹಿನ್ನೆಲೆ ‘Z’ ಪರಿಚಯಿಸಿದ ‘Dilfluencer Moments’ ಪರಂಪರೆಗೆ ಅಡ್ಡಿಪಡಿಸುವ ಜಾಹೀರಾತು ಮಾದರಿಗಳಿಗಿಂತ ಭಿನ್ನವಾಗಿ, ಕಥನದೊಳಗೆ ಸಹಜವಾಗಿ ಬ್ರ್ಯಾಂಡ್‌ಗಳನ್ನು ಬೆಸೆಯುವ ಪ್ರಯತ್ನವಾಗಿದೆ.

ಇದನ್ನೂ ಓದಿ:

ಟೆಲಿವಿಷನ್‌ನಲ್ಲಿ ಜನಪ್ರಿಯವಾಗಿರುವ ‘Z’ಯ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ರೂಪುಗೊಂಡಿರುವ ಈ ಫಾರ್ಮ್ಯಾಟ್, ಭಾವನಾತ್ಮಕ ನಂಟು, ವಿಶ್ವಾಸ ಮತ್ತು ಸಾಂಸ್ಕೃತಿಕ ಸಮೀಪತೆಯನ್ನು ಒಟ್ಟುಗೂಡಿಸುತ್ತದೆ. ಕಥೆಗಳು ಮೊದಲು ಟಿವಿಯಲ್ಲಿ ಹುಟ್ಟಿ, ನಂತರ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳತ್ತ ಸಹಜವಾಗಿ ವಿಸ್ತರಿಸುವ ಮೂಲಕ ವೈರಾಲಿಟಿಗೆ ದಾರಿ ಮಾಡಿಕೊಡುತ್ತವೆ. ಇದರಿಂದ ಬ್ರ್ಯಾಂಡ್ ಸಂದೇಶಗಳು ಜಾಹೀರಾತಿನಂತೆ ಕಾಣದೆ, ಅನುಭವದ ಭಾಗವಾಗಿ ಗ್ರಾಹಕರ ಮನಸ್ಸಿಗೆ ತಲುಪುತ್ತವೆ.

ಈ ಮಾದರಿಯ ಶಕ್ತಿ “TumHoLovely” ಅಭಿಯಾನದ “Jab life ko leti ho lightly toh lagti ho aur bhi lovely” ಎಂಬ ಸಂದೇಶದೊಂದಿಗೆ ಸ್ಪಷ್ಟವಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಬಾಲಕಿಯರ ದಿನದ ಸಂದರ್ಭದಲ್ಲಿ ಆರಂಭವಾದ ಈ ಅಭಿಯಾನವು ಧಾರಾವಾಹಿ ಪಾತ್ರಾಧಾರಿತ ಕ್ಷಣಗಳ ಮೂಲಕ ಕಥೆಯನ್ನು ಕಟ್ಟಿಕೊಂಡು, ಡಿಜಿಟಲ್ ವೇದಿಕೆಗಳಲ್ಲಿ ವೇಗವಾಗಿ ಹರಡಿತು. ಸಾನಿಯಾ ಮಲ್ಹೋತ್ರಾ ಅಭಿನಯದ ಬ್ರ್ಯಾಂಡ್ ಫಿಲ್ಮ್ ಈ ಸಂದೇಶಕ್ಕೆ ಇನ್ನಷ್ಟು ಬಲ ನೀಡಿತು. ಪರಿಣಾಮವಾಗಿ 25 ಮಿಲಿಯನ್‌ಗಿಂತ ಹೆಚ್ಚು ಇಂಪ್ರೆಷನ್ಸ್, 2.5 ಮಿಲಿಯನ್ ಎಂಗೇಜ್‌ಮೆಂಟ್ ಮತ್ತು ಸಾವಿರಕ್ಕೂ ಅಧಿಕ ಅರ್ಥಪೂರ್ಣ ಸಂಭಾಷಣೆಗಳು ದಾಖಲಾದವು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !