ಹೊಸದಿಗಂತ ವರದಿ, ವಿಜಯಪುರ:
ಇದು ಜಾತಿ ಗಣತಿ ಅಲ್ಲ, ಆರ್ಥಿಕ, ಸಾಮಾಜಿಕ ಸಮೀಕ್ಷೆ. ಲಿಂಗಾಯತ ಸೇರಿ ಸಣ್ಣ ಸಮಾಜಗಳು, ಬ್ರಾಹ್ಮಣ ಸಮುದಾಯ ಸೇರಿ ಸಣ್ಣ ಪುಟ್ಟ ಸಮಾಜಗಳಿಗೆ ನ್ಯಾಯ ಸಿಗಲಿ ಎಂದೆ ಈ ಸಮೀಕ್ಷೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಳಿಸೋಕೆ ಜಾತಿ ಗಣತಿ ಗೊಂದಲ ಸೃಷ್ಟಿ ವಿಚಾರ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಇದ್ದರಲ್ಲಿ ತಿಳಿದೋ, ತಿಳಿಯದೆಯೋ ಸಮಸ್ಯೆಗಳಿವೆ, ನಾವು ಎರಡು ಕಡೆ ಜಾತಿ ನೋಂದಣಿ ಮಾಡಿದ್ದೇವೆ.
ಸಮಾಜಗಳು ಈಗ ನಮ್ಮದು ಕಡಿಮೆಯಾಗಿದೆ, ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಿಂದೂಳಿದ ಇಲಾಖೆ ಸಚಿವರು ವಿವರಣೆ ಕೊಟ್ಟಿದ್ದಾರೆ. ಲಿಂಗಾಯತರು ಅಷ್ಟೇ ಎಲ್ಲ, ಎಲ್ಲ ಸಮಾಜಗಳಿಗೆ ನ್ಯಾಯ ಸಿಗಬೇಕು. ಬಸವ ತತ್ವ, ಅನುಭವ ಮಂಟಪದ ರೀತಿ ಪರಿಹಾರ ಸಿಗಬೇಕು ಎಂದರು.
ಜಾತಿ ಗಣತಿ ವರದಿ ಗೊಂದಲ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ವಿಚಾರಕ್ಕೆ, ಈ ಹಿಂದೆ ಬಿ.ವೈ. ವಿಜಯೇಂದ್ರ ಅವರ ತಂದೆ ಬಿ.ಎಸ್. ಯಡಿಯೂರಪ್ಪನವರು ಮಾಡಿದ್ದು ತೆಗೆಯಬೇಕು ಅಂದರೆ ಬಹಳ ಇದೆ. ಇವರ ತಂದೆ ಕೆಲವರನ್ನ 3 ಬಿ ಯಲ್ಲಿ ಹಾಕಿದ್ದರು, ಮತ್ತೆ ಒಂದೆ ತಿಂಗಳಲ್ಲಿ ತೆಗೆದರು. ಹಾಕಿದ್ದ 15 ಉಪ ಪಂಗಡಗಳನ್ನ ತೆಗೆದರು, ಇವರ ಇತಿಹಾಸ ದೊಡ್ಡದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ನಾಲ್ಕು ವರ್ಷವಾದರೂ ಜಾತಿ ಗಣತಿ ಜಾರಿ ಆಗಲ್ಲ ಎಂಬ ವಿಜಯೇಂದ್ರ ಹೇಳಿಕೆ ವಿಚಾರ ಕುರಿತು, ವಿಜಯೇಂದ್ರ ಏನು ನಮ್ಮ ಹೈಕಮಾಂಡಾ ?, ಮೊದಲು ತಮ್ಮ ಕುರ್ಚಿ ಉಳಿಸಿಕೊಳ್ಳಲಿ. ವಿಜಯೇಂದ್ರ ಬಗ್ಗೆ ಯತ್ನಾಳ್‌ರಿಗೆ ಕೇಳರಿ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಟೈಂ ಬಾಂಬ್ ಪಿಕ್ಸ್, ಸರ್ಕಾರ ಉರುಳಲಿದೆ, ಜಗದೀಶ ಶಟ್ಟರ್ ಹೇಳಿಕೆ ವಿಚಾರಕ್ಕೆ, ಜಗದೀಶ ಶಟ್ಟರ್ ಮಾಜಿ ಮುಖ್ಯಮಂತ್ರಿ ಆಗಿದ್ದರು, ಬಿಜೆಪಿಯಲ್ಲಿ ಟಿಕೆಟ್ ಕೊಟ್ಟಿರಲಿಲ್ಲ. ನಾವು ಕಾಂಗ್ರೆಸ್‌ನಿಂದ ಟಿಕೆಟ್ ಕೊಟ್ವಿ, ಅದನ್ನು ಸೋತರು. ಸೋತ ಮೇಲೆ ಎಂಎಲ್‌ಸಿ ಮಾಡಿದ್ವಿ, ಆದರೂ ಜಿಗಿದು ಹೋದರು ಎಂದು ದೂರಿದರು.