ನಿನ್ನ ಮೇಲೆ ಪ್ರೀತಿಯಿಲ್ಲ ಎಂದ ಮಾಜಿ ಪ್ರೇಯಸಿಗೆ ನಡುರಸ್ತೆಯಲ್ಲಿ ಚಾಕು ಚುಚ್ಚಿದ ಯುವಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯುವತಿ ಮದುವೆಯಾಗಲು ನಿರಾಕರಿಸಿದಕ್ಕೆ ಪ್ರಿಯಕರ ಜನನಿಬಿಡ ಸ್ಥಳದಲ್ಲಿಯೇ ಚಾಕು ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ನಗರಸಭೆ ಕಾರ್ಯಾಲಯ ಎದುರುಗಡೆ ನಡೆದಿದೆ.

ಭಾರತಿ ಶಾವಿ (26) ಹಲ್ಲೆಗೊಳಗಾದ ಯುವತಿ. ವಿಜಯಭಾಸ್ಕರ್(26) ಹಲ್ಲೆ ಮಾಡಿದ ಪ್ರೇಮಿ. ಕಳೆದ 10 ವರ್ಷಗಳಿಂದ ಯುವತಿ ಭಾರತಿ ಹೊಸಪೇಟೆಯಲ್ಲಿ ತಂದೆ-ತಾಯಿ ಜೊತೆ ವಾಸವಿದ್ದಳು. 5 ವರ್ಷಗಳ ಹಿಂದೆ ಯುವಕನ ಜೊತೆ ಫೇಸ್‌ಬುಕ್‌ನಲ್ಲಿ ಪರಿಚಯ ಆಗಿ ಇಬ್ಬರಿಗೂ ಲವ್ ಆಗಿತ್ತು.

ಆ ಬಳಿಕ ಯುವತಿ ಆಂಧ್ರದ ಸ್ವಗ್ರಾಮಕ್ಕೆ ಹೋದಾಗಲೆಲ್ಲಾ ತೀರಾ ಸಲುಗೆಯಿಂದ ಇರ್ತಿದ್ರು. ಇತ್ತೀಚೆಗೆ ಯುವತಿ ಯುವಕನಿಂದ ಅಂತರ ಕಾಯ್ದುಕೊಂಡಿದ್ದಳು ಎನ್ನಲಾಗಿದೆ. ಅಂತರ ಕಾಯ್ದುಕೊಂಡಿದ್ದಲ್ಲದೇ ಭಾರತಿ, ವಿಜಯಭಾಸ್ಕರ ಪ್ರೀತಿ ನಿರಾಕರಿಸಿದ್ದಳು.

ಯುವತಿಯು ಮದುವೆಗೆ ನಿರಾಕರಿಸಿದಕ್ಕೆ ಆಂಧ್ರಪ್ರದೇಶದ ನಂದ್ಯಾಲ ಗ್ರಾಮದಿಂದ ಹೊಸಪೇಟೆ ನಗರಕ್ಕೆ ಆಗಮಿಸಿದ ಯುವಕ ಆಕೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಯುವತಿಯು ಕೆಲಸಕ್ಕೆ ತೆರಳುತ್ತಿದ್ದಾಗ ಚಾಕುವಿನಿಂದ ಆಕೆಯ ಹೊಟ್ಟೆ ಹಾಗೂ ಕೈಗೆ ಇರಿದಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!