ದೇಶಾದ್ಯಂತ ನಕಲಿ ₹500 ನೋಟುಗಳ ಓಡಾಟ: ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದಿಂದ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದಲ್ಲಿ ನಕಲಿ ₹500 ನೋಟುಗಳ ಓಡಾಟ ಸದ್ದು ಮಾಡಿದ್ದು, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಎಚ್ಚರಿಕೆ ನೀಡಿದೆ.

ನಕಲಿ ನೋಟುಗಳು ಚಲಾವಣೆಯಲ್ಲಿದೆ ಎನ್ನುವ ಗುಪ್ತಚರ ಸುಳಿವು ಸಿಕ್ಕಿದೆ. ಹೀಗಾಗಿ ಸೂಕ್ಷ್ಮವಾಗಿ 500 ರೂ. ನೋಟುಗಳನ್ನ ಪರಿಶೀಲನೆ ಮಾಡುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದೆ.

ದೇಶದಲ್ಲಿ ಹಣಕಾಸು ವ್ಯವಹಾರಗಳನ್ನ ಮುನ್ನೆಡೆಸುವ ಫೈನಾನ್ಸ್‌, ಬ್ಯಾಂಕ್ ಮತ್ತು ಜಾರಿ ಸಂಸ್ಥೆಗಳಿಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಅಲರ್ಟ್‌ ನೀಡಿದೆ. ಗುಪ್ತಚರ ಮಾಹಿತಿಯ ಪ್ರಕಾರ ದೇಶಾದ್ಯಂತ ಸದ್ಯ ಉತ್ತಮ ಗುಣಮಟ್ಟದ ನಕಲಿ ನೋಟುಗಳು ಚಲಾವಣೆಯಲ್ಲಿದೆ. ನಕಲಿ ನೋಟು ಅಸಲಿ ನೋಟುಗಳ ಗುಣಮಟ್ಟದಲ್ಲೇ ಚಲಾವಣೆಯಲ್ಲಿದೆ. ಹೀಗಾಗಿ ಆರ್‌ಬಿಐ ನೀಡಿರುವ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅಸಲಿ ಮತ್ತು ನಕಲಿ ನೋಟುಗಳನ್ನ ಕಂಡು ಹಿಡಿಯೋದು ಹೇಗೆ ಅನ್ನೋದರ ಬಗ್ಗೆಯೂ ತಿಳಿಸಿದೆ. ಆರ್‌ಬಿಐ ತನ್ನ ಅಸಲಿ ನೋಟುಗಳಲ್ಲಿ ‘RESERVE BANK OF INDIA’ ಎಂದು ಮುದ್ರಿಸಲಾಗುತ್ತದೆ. ಆದರೆ ಅದೇ ರೀತಿಯ ನಕಲಿ ನೋಟುಗಳಲ್ಲಿ ‘A’ ಅನ್ನೋ ಅಕ್ಷರದ ಜಾಗದಲ್ಲಿ ‘E’ ಮುದ್ರಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!