CINE | ಪ್ರಭಾಸ್‌ ಸಿನಿಮಾ ನಾಯಕಿಗೆ ಪಾಕ್‌ ಆರ್ಮಿ ಜೊತೆ ಕನೆಕ್ಷನ್‌? ನಿಷೇಧಕ್ಕೆ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಭಾಸ್‌ ಹೊಸ ಸಿನಿಮಾದ ನಾಯಕಿಗೆ ಪಾಕ್‌ ಆರ್ಮಿ ಜೊತೆ ಕನೆಕ್ಷನ್‌ ಇದೆ ಎನ್ನಲಾಗಿದ್ದು, ಆಕೆಯನ್ನು ನಮ್ಮ ಸಿನಿಮಾ ಇಂಡಸ್ಟ್ರಿಯಿಂದ ನಿಷೇಧಿಸಿ ಎಂದು ಜನ ಆಗ್ರಹಿಸಿದ್ದಾರೆ.

ವಿಕಿಪೀಡಿಯಾ ಹಾಗೂ ಇತರೆ ಇಂಟರ್ನೆಟ್​ನಲ್ಲಿ ಲಭ್ಯ ಮಾಹಿತಿಗಳ ಪ್ರಕಾರ ನಟಿ ಇಮಾನ್ವಿ ಇಸ್ಲಾಮಿಯ ಮೂಲ ಪಾಕಿಸ್ತಾನ, ಅವರ ಜನನ ಕರಾಚಿಯಲ್ಲಿ ಆಗಿದೆಯಂತೆ. ಇಮಾನ್ವಿಯ ತಂದೆ ಇಕ್ಬಾಲ್ ಇಸ್ಮಾಯಿಲ್ ಖಾನ್ ಪಾಕಿಸ್ತಾನ ಸೇನೆಯ ಅಧಿಕಾರಿಯಾಗಿದ್ದವರು. ಇಮಾನ್ವಿಗೆ ಎಂಟು ವರ್ಷ ವಯಸ್ಸಾಗಿದ್ದಾಗ ಅವರು ಪಾಕಿಸ್ತಾನದಿಂದ ಕ್ಯಾಲಿಫೋರ್ನಿಯಾಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಿದ್ದಾರೆ. ಪಾಕಿಸ್ತಾನ ಸೇನೆಯೊಟ್ಟಿಗೆ ನಂಟು ಹೊಂದಿರುವ ಇಮಾನ್ವಿಯ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಎದುರಾಗುತ್ತಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಇಮಾನ್ವಿ, ‘ನನ್ನ ಬಗ್ಗೆ ಸುಳ್ಳು ಮಾಹಿತಿಗಳನ್ನು ಹರಿಬಿಡಲಾಗುತ್ತಿದೆ. ನನ್ನ ಕುಟುಂಬದ ಯಾರೂ ಸಹ ಎಂದಿಗೂ ಸಹ ಯಾವುದೇ ರೀತಿಯಲ್ಲಿಯೂ ಪಾಕಿಸ್ತಾನದ ಸೇನೆಯೊಟ್ಟಿಗೆ ಕೆಲಸ ಮಾಡಿಲ್ಲ. ನಾನು ಪಾಕಿಸ್ತಾನದವಳಲ್ಲ, ನಾನೊಬ್ಬ ಹೆಮ್ಮೆಯ ಭಾರತೀಯ ಮೂಲದ ಅಮೆರಿಕನ್ ಪ್ರಜೆ. ನಾನು ಹಿಂದಿ, ತೆಲುಗು, ಗುಜರಾತಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಮಾತನಾಡಬಲ್ಲವಳಾಗಿದ್ದೇನೆ. ನಾನು ಹುಟ್ಟಿರುವುದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲ್ಸ್​ನಲ್ಲಿ. ನನ್ನ ಪೋಷಕರು ಯುವಕರಾಗಿದ್ದಾಗಲೇ ಅಮೆರಿಕಕ್ಕೆ ವಲಸೆ ಬಂದಿದ್ದರು. ನಾನು ಕಲೆ, ನಟನೆ ಮತ್ತು ನೃತ್ಯದ ಅಭ್ಯಾಸ ಮಾಡಿದ್ದೇನೆ. ನನ್ನ ಜೀವನದ ಮೇಲೆ ಭಾರತೀಯ ಸಿನಿಮಾದ ಪ್ರಭಾವ ಸಾಕಷ್ಟಿದೆ. ಈಗ ಅದೇ ಚಿತ್ರರಂಗದಿಂದ ನನಗೆ ಅವಕಾಶ ಸಿಕ್ಕಿರುವುದು ನನಗೆ ಖುಷಿ ಇದೆ’ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!