ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರ ನಮ್ಮದಾಗಿತ್ತು, ಇದೆ ಮತ್ತು ಯಾವಾಗಲೂ ನಮ್ಮದಾಗಿರುತ್ತದೆ ಎಂದು ನಟ ಸುನೀಲ್ ಶೆಟ್ಟಿ ಪುನರುಚ್ಚರಿಸಿದ್ದಾರೆ.
ಲತಾ ದೀನನಾಥ್ ಮಾಂಗೇಶ್ಕರ್ ಪ್ರಶಸ್ತಿ 2025 ಸಮಾರಂಭದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀಲ್ ಶೆಟ್ಟಿ, ನಮಗೆ, ಮಾನವೀಯತೆಯ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ದೇವರು ಎಲ್ಲವನ್ನೂ ನೋಡಿ ಉತ್ತರಿಸುವನು. ಇದೀಗ, ನಾವು ಭಾರತೀಯರಾಗಿ ಒಗ್ಗಟ್ಟಿನಿಂದ ಇರಬೇಕು. ಭಯ ಮತ್ತು ದ್ವೇಷವನ್ನು ಹರಡಲು ಪ್ರಯತ್ನಿಸುವವರ ಬಲೆಗೆ ನಾವು ಬೀಳಬಾರದು, ಬದಲಾಗಿ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದ್ದಾರೆ.
ನಾಳೆ ಯಾರಾದರೂ ನೀವು ಪ್ರವಾಸಿಗರಾಗಿ ಅಥವಾ ಕಲಾವಿದನಾಗಿ ಕಾಶ್ಮೀರಕ್ಕೆ ಬರಬೇಕು ಎಂದು ಹೇಳಿದರೆ, ನಾನು ಅಲ್ಲಿ ಚಿತ್ರೀಕರಣ ಮಾಡಲು ಅಥವಾ ಪ್ರವಾಸಕ್ಕೆ ಹೋಗಲು ಖಂಡಿತವಾಗಿಯೂ ಸಿದ್ದನಿದ್ದೇನೆ ಎಂದು ಅವರು ಹೇಳಿದರು.