ಹೊಸದಿಗಂತ ಡಿಜಿಟಲ್ ಡೆಸ್ಕ್;
ಇರಾನ್ನ ಬಂದರ್ ಅಬ್ಬಾಸ್ ಪೋರ್ಟ್ನಲ್ಲಿ ಭಾರೀ ಸ್ಪೋಟ ಸಂಭವಿಸಿದ್ದು, ಕನಿಷ್ಠ 400 ಮಂದಿ ಗಾಯಾಳುವಾಗಿದ್ದಾರೆ. ಸಾವಿನ ಸಂಖ್ಯೆಯ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ.
ಇರಾನ್ನ ಪ್ರಮುಖ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಹಲವು ಕಂಟೇನರ್ಗಳು ಏಕಕಾಲಕ್ಕೆ ಸ್ಫೋಟಗೊಂಡಿದ್ದರಿಂದ ದೊಡ್ಡ ಪ್ರಮಾಣದ ಬ್ಲಾಸ್ಟ್ ಹಾಗೂ ಬೆಂಕಿ ಉಂಟಾಗಿದೆ.
ಶಾಹಿದ್ ರಾಜೀ ಬಂದರು ಡಾಕ್ನ ಒಂದು ಭಾಗದಲ್ಲಿ ಸ್ಫೋಟ ಸಂಭವಿಸಿದೆ ಮತ್ತು ನಾವು ಬೆಂಕಿಯನ್ನು ನಂದಿಸುತ್ತಿದ್ದೇವೆ ಎಂದು ಪ್ರಾದೇಶಿಕ ಬಂದರು ಅಧಿಕಾರಿ ಎಸ್ಮಾಯಿಲ್ ಮಲೆಕಿಜಾದೆ ಅವರನ್ನು ಉಲ್ಲೇಖಿಸಿ ಇರಾನ್ ಟಿವಿ ವರದಿ ಮಾಡಿದೆ.
ಸ್ಫೋಟದ ನಂತರ ನಾಲ್ಕು ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಹಾರ್ಮೋಜ್ಗನ್ ರೆಡ್ ಕ್ರೆಸೆಂಟ್ ಸೊಸೈಟಿಯ ಮುಖ್ಯಸ್ಥ ಮೊಖ್ತರ್ ಸಲಾಹ್ಶೌರ್ ಇರಾನ್ ಟಿವಿಗೆ ತಿಳಿಸಿದರು.