ಚಿತ್ರದುರ್ಗದಲ್ಲಿ ಉಗ್ರರ ದಾಳಿ ಖಂಡಿಸಿ ಬೃಹತ್ ಪ್ರತಿಭಟನೆ, ಪಂಜಿನ ಮೆರವಣಿಗೆ 

ಹೊಸದಿಗಂತ ವರದಿ,  ಚಿತ್ರದುರ್ಗ:  
ಜಮ್ಮು-ಕಾಶ್ಮೀಕರದ ಅನಂತ್‌ನಾಗ್ ಜಿಲ್ಲೆಯ ಪುಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಖಂಡಿಸಿ ವಿಶ್ವ ಹಿಂದೂ ಪರಿಷತ್ – ಜರಂಗದಳದ ವತಿಯಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಆನೆ ಬಾಗಿಲಿನಿಂದ ಹೊರಟ ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ್ತ ತಲುಪಿತು. ಅಲ್ಲಿ ಉಗ್ರರ ಪ್ರತಿಕೃತಿ ಹಾಗೂ ಪಾಕಿಸ್ತಾನದ ಧ್ವಜಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಉಗ್ರರು ಹಾಗೂ ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಪ್ರತಿಭಟನಾಕಾರರಿ ಘೋಷಣೆಗಳನ್ನು ಕೂಗಿದರು. ನಂತರ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ವೃತ್ತ ತಲುಪಿತು. ಅಲ್ಲಿ ಉಗ್ರರ ದಾಳಿಯಲ್ಲಿ ಮಡಿದವರಿಗೆ ಮೌನಾಚರಣೆ, ಪುಷ್ಪಾಚರಣೆ ಮಾಡಿ, ಪಂಜಿನ ಮೆರವಣಿಗೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಜರಂಗದಳ ರಾಜ್ಯ ಸಂಚಾಲಕ ಪ್ರಭಂಜನ್ ಮಾತನಾಡಿ, ದೇಶದ ನಾನಾ ಭಾಗಗಳಿಂದ ಜನರು ಕಾಶ್ಮೀರ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಇದರಿಂದ ಅಲ್ಲಿನ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವಾಗುತ್ತಿದೆ. ಆ ಹಣವನ್ನು ಭಯೋತ್ಪಾದನೆಗೆ ಬಳಸಲಾಗುತ್ತಿದೆ. ಈ ಕುರಿತು ಹಿಂದೂ ಬಾಂಧವರು ಎಚ್ಚರ ವಹಿಸಬೇಕು. ವ್ಯಾಪಾರ ಮಾಡುವಾಗಲೂ ವಿವೇಚನೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಪಹಲ್ಗಾಮ್‌ನಲ್ಲಿ ಏಕಾಏಕಿ ಎಂಟು ಜನ ಉಗ್ರರು ಪ್ರವಾಸಿಗರ ಮೇಲೆ ದಾಳಿ ಮಾಡಿದರು. ದಾಳಿ ಮಾಡುವ ಮೊದಲು ಧರ್ಮ ಕೇಳಿ ಹಿಂದೂಗಳನ್ನು ಹುಡುಕಿ ಹೊಡೆದಿದ್ದಾರೆ ನಪಂಸಕ ಉಗ್ರರು. ಈಗ ಪ್ರತಿಯೊಬ್ಬರಿಗೂ ಕಾಶ್ಮೀರಕ್ಕೆ ಹೋಗುವ ಅವಕಾಶವಿದೆ. ಎಲ್ಲರೂ ಅಲ್ಲಿಗೆ ಹೋಗಿ ನಾವು ಅದೇ ರೀತಿ ಹುಡುಕಿ ಹೊಡೆಯಬೇಕು. ಅಲ್ಲಿನ ನಮ್ಮವರನ್ನು ಹುಡುಕಿ ನಾವು ಅವರೊಂದಿಗೆ ವ್ಯಾಪಾರ ಮಾಡಬೇಕು. ಇದರಿಂದ ಹಣ ದುರುಪಯೋಗ ಆಗುವುದಿಲ್ಲ ಎಂದರು.

ದಾಳಿಯ ವೇಳೆ ಧರ್ಮವನ್ನು ಕೇಳಿ ಗುಂಡಿಕ್ಕಿ ಕೊಲ್ಲಲಾಗಿದೆ. ಅಲ್ಲಿಗೆ ಹೋಗಿದ್ದ ಪ್ರವಾಸಿರ ಹಣೆಗೆ ಗನ್ ಇಟ್ಟು ಧರ್ಮ ಕೇಳಿದಾಗ ಅವರು ಧೈರ್ಯದಿಂದ ಹಿಂದೂ ಎಂದು ಹೇಳಿದ್ದಾರೆ. ಪ್ರಾಣ ಬಿಟ್ಟರೂ ಧರ್ಮ ಬಿಡಲಿಲ್ಲ. ಆದರೆ ನಾವು ಮುಸ್ಲೀಮರೊಟ್ಟಿಗೆ ವ್ಯಾಪಾರ ಮಾಡುತ್ತಿದ್ದೇವೆ. ಚಿತ್ರದುರ್ಗಕ್ಕೂ ಭಯೋತ್ಪಾದನೆ ಬಂದಿದೆ. ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈ ಕುರಿತು ಎಲ್ಲರೂ ಗಂಭೀರ ಚಿಂತನೆ ಮಾಡಬೇಕು ಎಂದು ಎಚ್ಚರಿಸಿದರು.

ಭಾರತೀಯ ಸೇನೆ ಸುಬೇದಾರ್ ಭಗತ್‌ಸಿಂಗ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾಶ್ಮೀರಕ್ಕೆ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಹಾಗಾಗಿ ಅವರನ್ನು ಗುರಿಯಾಗಿಸಿ ಉಗ್ರರು ದಾಳಿ ಮಾಡುತ್ತಿದ್ದಾರೆ. ಇದಕ್ಕೆ ಅಲ್ಲಿನ ಸ್ಥಳೀಯ ವ್ಯಾಪಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಹಾಗಾಗಿ ಪ್ರವಾಸಿಗರು ಕಾಶ್ಮೀರಕ್ಕೆ ಬಂದು ಖರ್ಚು ಮಾಡುವ ಹಣವನ್ನು ವ್ಯಾಪಾರಿಗಳು ಭಯೋತ್ಪಾದನೆಗೆ ಬಳಸುತ್ತಿದ್ದಾರೆ. ಹಾಗಾಗಿ ಪ್ರವಾಸಿಗರು ಅಲ್ಲಿಗೆ ಬರುವುದನ್ನು ಕಡಿಮೆ ಮಾಡಿ ಎಂದು ಸಲಹೆ ಮಾಡಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ದಾಳಿಯ ಹೋಣೆಯನ್ನು ಭಯೋತ್ಪಾದಕ ಸಂಘಟನೆಗಳು ಒಪ್ಪಿಕೊಂಡಿವೆ. ಉಗ್ರರಿಗೆ ಆಶ್ರಯ ನೀಡಿದ ಬಗ್ಗೆ ಪಾಕಿಸ್ತಾನ ಒಪ್ಪಿಕೊಂಡಿದೆ. ಜಗತ್ತಿನ ಮುಸ್ಲಿಂ ರಾಷ್ಟ್ರಗಳು ಸಹ ಉಗ್ರ ದಾಳಿಯನ್ನು ಖಂಡಿಸಿವೆ. ಆದರೆ ಕಾಂಗ್ರೇಸ್‌ನವರು ಇದನ್ನು ಅಲ್ಲಗಳೆಯುತ್ತಿದ್ದಾರೆ. ಉಗ್ರರ ಮೇಲೆ ಪ್ರತೀಕಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧ ಬೇಡ ಎಂದು ಮುಸ್ಮೀಮರನ್ನು ಓಲೈಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಸೌಭಾಗ್ಯ ಬಸವರಾಜನ್, ಹಿಂದೂಪರ ಸಂಘಟನೆಗಳ ಮುಖಂಡರಾದ ಷಡಾಕ್ಷರಯ್ಯ, ಬದ್ರಿನಾಥ್, ಜಿ.ಎಂ.ಸುರೇಶ್, ಬಿಜೆಪಿ ಮಲ್ಲಿಕಾರ್ಜುನ್, ಸಂಪತ್‌ಕುಮಾರ್, ಶ್ಯಾಮಲಾ ಶಿವಪ್ರಕಾಶ್, ರೇಖಾ, ಬಸಮ್ಮ, ನ್ಯಾಯವಾದಿ ವಿಶ್ವನಾಥಯ್ಯ ಸೇರಿದಂತೆ ನೂರಾರು ಸಂಖ್ಯೆಯ ಹಿಂದೂ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!