ಹೊಸದಿಗಂತ ಡಿಜಿಟಲ್ ಡೆಸ್ಕ್;
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಬಂಗಾಳದ ಮೂವರ ಕುಟುಂಬಗಳಿಗೆ ಮತ್ತು ಉಧಂಪುರ ಎನ್ಕೌಂಟರ್ನಲ್ಲಿ ಹುತಾತ್ಮರಾದ ಯೋಧನ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಘೋಷಿಸಿದ್ದಾರೆ.
ಜೊತೆಗೆ ನಾಡಿಯಾ ಜಿಲ್ಲೆಯ ತೆಹಟ್ಟಾದ ಹುತಾತ್ಮ ಯೋಧ ಹವಾಲ್ದಾರ್ ಝಂಟು ಅಲಿ ಶೇಖ್ ಅವರ ಪತ್ನಿಗೆ ರಾಜ್ಯ ಸರ್ಕಾರ ಉದ್ಯೋಗವನ್ನು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಪಹಲ್ಗಾಮ್ ಸಂತ್ರಸ್ತರಲ್ಲಿ ಒಬ್ಬರಾದ ಬಿಟಾನ್ ಅಧಿಕಾರಿ ಅವರ ತಂದೆಗೆ ರಾಜ್ಯ ಸರ್ಕಾರವು ಮಾಸಿಕ 10,000 ರೂ. ಪಿಂಚಣಿಯನ್ನು ಅಧಿಕಾರಿಯ ತಂದೆಗೆ ನೀಡಲಾಗುವುದು. ಕುಟುಂಬಕ್ಕೆ ಬರುವ 10 ಲಕ್ಷ ರೂ. ಪರಿಹಾರವನ್ನು ಸಮಾನವಾಗಿ ಹಂಚಲಾಗುತ್ತದೆ, 5 ಲಕ್ಷ ರೂ. ಅವರ ಪತ್ನಿಗೆ ಮತ್ತು 5 ಲಕ್ಷ ರೂ. ಅವರ ಪೋಷಕರಿಗೆ ಹೋಗುತ್ತದೆ ಎಂದು ಅವರು ತಿಳಿಸಿದರು.