February 1, 2026
Sunday, February 1, 2026
spot_img

ಆಭರಣ ಪ್ರಿಯರು ಫುಲ್‌ ಖುಷ್‌, ಬಜೆಟ್‌ಗೂ ಮುನ್ನ ಚಿನ್ನ, ಬೆಳ್ಳಿ ದರ ಇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದಲ್ಲಿ ಇದ್ದಕ್ಕಿದ್ದಂತೆಯೇ ಬೆಳ್ಳಿ ಹಾಗೂ ಬಂಗಾರದ ಬೆಲೆ ಹೆಚ್ಚಾಗಿತ್ತು. ಒಂದು ಗ್ರಾಮ್‌ ಚಿನ್ನ ಕೊಳ್ಳೋದಕ್ಕೂ ಹಿಂದೂ ಮುಂದು ನೋಡುವಂತಾಗಿತ್ತು. ಆದರೆ ನಿನ್ನೆ ಚಿನ್ನ ಬೆಳ್ಳಿ ದರ ಕೊಂಚ ಇಳಿಕೆಯಾಗಿತ್ತು.

ಇನ್ನು ಇಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದೆ, ಬಜೆಟ್‌ ಮಂಡನೆಗೂ ಮುನ್ನ ಚಿನ್ನ-ಬೆಳ್ಳಿ ದರ ಇಳಿಕೆಯಾಗಿದೆ. ಆಭರಣ ಪ್ರಿಯರಿಗೆ ಇದು ಸಂತಸದ ಸುದ್ದಿಯಾಗಿದೆ.

ಬಜೆಟ್​ ಮಂಡನೆಗೂ ಮುನ್ನ ಚಿನ್ನ, ಬೆಳ್ಳಿ ದರ ಇಳಿಕೆ ಕಂಡಿದೆ. ಇಂದು ಕೆಜಿ ಬೆಳ್ಳಿ ದರದಲ್ಲಿ 27 ಸಾವಿರ ರೂ. ಇಳಿಕೆಯಾಗಿದೆ. 24 ಕ್ಯಾರೆಟ್​ 10 ಗ್ರಾಂ ಚಿನ್ನ ದರ 9 ಸಾವಿರ ರೂ. ಇಳಿಕೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !