ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ಇದರ ನಡುವೆ ಇದೀಗ ಸುಪ್ರೀಂ ಕೋರ್ಟ್, ರಣವೀರ್ ಅಲಹಬಾದಿಯಾಗೆ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿದೆ.
ರಣವೀರ್ ಅಲಹಬಾದಿಯಾ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈಗಾಲೇ ವಿಚಾರಣೆ ಪೂರ್ಣಗೊಂಡಿರುವ ಕಾರಣ ರಣವೀರ್ ಪಾಸ್‌ಪೋರ್ಟ್‌ನ್ನು ರಿಲೀಸ್ ಮಾಡಲು ಸೈಬರ್ ಕ್ರೈಂ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮುಂಬೈ ಪೊಲೀಸರು ರಣವೀರ್ ಅಲಹಾಬಾದಿಯಾ ವಶಕ್ಕೆ ಪಡೆದು ಪಾಸ್‌ಪೋರ್ಟ್ ವಶಪಡಿಸಿಕೊಂಡಿದ್ದರು. ಹೀಗಾಗಿ ವಿಚಾರಣೆ ನಡುವೆ ರಣವೀರ್ ಅಲಹಾಬಾದಿಯಾ ತನ್ನ ಕೆಲಸದ ನಿಮಿತ್ತ ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿದ್ದರು. ಆದರೆ ಇದಕ್ಕೆ ಮುಂಬೈ ಹಾಗೂ ಅಸ್ಸಾಂ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ವಿಚಾರಣೆ ಅಂತ್ಯಗೊಂಡಿರುವ ಕಾರಣ ಸುಪ್ರೀಂ ಕೋರ್ಟ್ ಪಾಸ್‌ಪೋರ್ಟ್ ರಿಲೀಸ್ ಮಾಡುವಂತೆ ಸೈಬರ್ ಕ್ರೈಂ ಪೊಲೀಸರಿಗೆ ಸೂಚಿಸಿದೆ.
ಹಾಸ್ಯನಟ ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋನಲ್ಲಿ ರಣವೀರ್ ಅಶ್ಲೀಲ ಹೇಳಿಕೆ ನೀಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು. ಆದರೆ ಬಂಧನಕ್ಕೂ ಮೊದಲು ಮಧ್ಯಂತರ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದ ರಣವೀರ್ ಅಲಹಬಾದಿಯಾ ಜಾಮೀನು ಪಡೆಯಲು ಪಾಸ್‌ಪೋರ್ಟ್ ಠೇವಣಿಯಾಗಿ ನೀಡಿದ್ದರು.