RELATIONSHIP | ಅತ್ತೆ ಮಾವನ ಜೊತೆ ಉತ್ತಮ ಸಂಬಂಧ ನಿರ್ವಹಿಸಲು ಇಲ್ಲಿದೆ ಕೆಲವು ಸಲಹೆಗಳು!

ನಾವು ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾಗುವುದು ನಮ್ಮ ಜೀವನದ ಅತ್ಯಂತ ಸುಂದರ ಕ್ಷಣ. ಆದರೆ ನಮ್ಮಲ್ಲಿ ಹೆಚ್ಚಿನವರು ನಮ್ಮ ಅತ್ತೆ ಮತ್ತು ಮಾವನೊಂದಿಗೆ ಇರಲು ತುಂಬಾ ಕಷ್ಟ ಎಂದು ಭಾವಿಸುತ್ತಾರೆ. ಹೀಗಾಗಿ ಅವರನ್ನು ನಿರ್ಲಕ್ಷಿ ಬಿಡುತ್ತಾರೆ. ಆದರೆ ನಿಮ್ಮ ಹೊಸ ಕುಟುಂಬದೊಂದಿಗೆ ನಿಮ್ಮ ಸಂಬಂಧವನ್ನು ನಿರ್ಮಿಸಲು ಇದು ಸರಿಯಾದ ಮಾರ್ಗವಲ್ಲ. ಇವತ್ತು ನಾವು ಅತ್ತೆ ಮಾವನೊಂದಿಗೆ ಭಿನ್ನಾಭಿಪ್ರಾಯವಿಲ್ಲದೆ ಉತ್ತಮ ಬಾಂದವ್ಯ ಬೆಳೆಸಿಕೊಳ್ಳುವುದು ಹೇಗೆ ಎಂದು ಕೆಲವು ಸಲಹೆಗಳನ್ನು ನೀಡುತ್ತೇವೆ.

ಮುಕ್ತವಾಗಿ ಸಂವಹನ ನಡೆಸಿ: ನಿಮ್ಮ ಅತ್ತೆ ಮಾವನೊಂದಿಗೆ ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಪ್ರೋತ್ಸಾಹಿಸಿ. ಕಾಲಾನಂತರದಲ್ಲಿ ಅಸಮಾಧಾನವನ್ನು ನಿರ್ಮಿಸಲು ಬಿಡುವ ಬದಲು ನೇರವಾಗಿ ಮತ್ತು ಗೌರವಯುತವಾಗಿ ಸಮಸ್ಯೆಗಳನ್ನು ಪರಿಹರಿಸಿ.

ಟೀಕೆಗಳ ಬಗ್ಗೆ ಎಚ್ಚರದಿಂದಿರಿ: ನಿಮ್ಮ ಸಂಗಾತಿ ತನ್ನ ಪೋಷಕರ ವಿರುದ್ಧ ಕಾಮೆಂಟ್ ಮಾಡಬಹುದು, ಹಾಗೆಂದ ಮಾತ್ರಕ್ಕೆ ನೀವೂ ನಕಾರಾತ್ಮಕವಾಗಿ ತೆಗೆದುಕೊಳ್ಳುವುದಲ್ಲ. ಆದಾಗ್ಯೂ ನಿಮಗೆ ಈ ಬಗ್ಗೆ ಹಂಚಿಕೊಳ್ಳಬೇಕೆಂದಿದ್ದರೆ ನಿಮ್ಮ ಆಪ್ತ ಸ್ನೇಹಿತ ಅಥವಾ ಸ್ನೇಹಿತೆಯೊಂದಿಗೆ ಹೇಳಿಕೊಳ್ಳಬಹುದು. ನಿಜವಾಗಿಯೂ ಪರಿಹರಿಸಬೇಕಾದ ಸಮಸ್ಯೆಗಳಿದ್ದರೆ, ನಿಮ್ಮ ಸಂಗಾತಿಯ ಕಾಳಜಿಯನ್ನು ಸಕಾರಾತ್ಮಕವಾಗಿ, ರಕ್ಷಣಾತ್ಮಕವಲ್ಲದ ರೀತಿಯಲ್ಲಿ ಹಂಚಿಕೊಳ್ಳಲು ಮತ್ತು ಸ್ವೀಕರಿಸಲು ಮರೆಯದಿರಿ.

ವಿಷಯವನ್ನು ಬದಲಾಯಿಸಲು ಕಲಿಯಿರಿ:
ಕೆಲವು ಹಂತದಲ್ಲಿ, ನಮಗೆ ಪ್ರಯೋಜನಕಾರಿಯಾಗಿರದಂತಹ ಕೆಲವು ಸಲಹೆಗಳು ಅತ್ತೆ-ಮಾವಂದಿರಿಂದ ಬರಬಹುದು. ಈ ರೀತಿಯಾಗಿ ಸಲಹೆ ಬಂದಾಗ ಅದಕ್ಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು, ತಟಸ್ಥ ಪ್ರತಿಕ್ರಿಯೆ ನೀಡುವುದನ್ನು ಅಭ್ಯಾಸ ಮಾಡುವುದು ಒಳ್ಳೆಯದು.

ಬೆಂಬಲ ನೀಡದ ಮಾವ ಅತ್ತೆಯೊಂದಿಗೆ ಕಳೆಯುವ ಸಮಯವನ್ನು ಕಡಿಮೆ ಮಾಡಿ
ಹೆಚ್ಚಿನ ಸಮಯ, ನಾವು ನಮ್ಮ ಸಂಬಂಧಿಕರೊಂದಿಗೆ ಸಮಯವನ್ನು ಕಳೆಯುವ ಮೂಲಕ ಕುಟುಂಬ ಸಂಬಂಧಗಳನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ಆದರೆ, ಕೆಲವು ಅತ್ತೆ ಮಾವಂದಿರು ನಿಮ್ಮ ದಾಂಪತ್ಯದಲ್ಲಿ ಅಡಚಣೆ ಉಂಟು ಮಾಡಬಹುದು. ಹೀಗಾದರೆ ನಿಮ್ಮ ಆದ್ಯತೆಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ. ಮಾವ ಅತ್ತೆಯೊಂದಿಗೆ ಕಡಿಮೆ ಸಮಯವನ್ನು ಕಳೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!