74 ಬುಲ್ಡೋಜರ್‌, 200 ಟ್ರಕ್‌, 1,800 ಕಾರ್ಮಿಕರು, 3000 ಪೊಲೀಸ್: ಬಾಂಗ್ಲಾ ಅಕ್ರಮ ವಲಸಿಗರ ಮನೆಗಳು ಉಡೀಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ನಲ್ಲಿ ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಬೃಹತ್‌ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿದೆ.

74 ಬುಲ್ಡೋಜರ್‌ಗಳು, 200 ಟ್ರಕ್‌ಗಳು, 1,800 ಕಾರ್ಮಿಕರು, 3000 ಪೊಲೀಸ್‌ ಅಧಿಕಾರಿಗಳು ಆಪರೇಷನ್‌ನ ಭಾಗವಾಗಿದ್ದು, ಬಾಂಗ್ಲಾ ಅಕ್ರಮ ವಲಸಿಗರ ಮನೆಗಳನ್ನು ನೆಲಸಮ ಮಾಡಿದ್ದಾರೆ.

ಚಂಡೋಲಾ ಸರೋವರವು ಅಹಮದಾಬಾದ್‌ನಲ್ಲಿ ಅತಿ ಹೆಚ್ಚು ಬಾಂಗ್ಲಾದೇಶದ ಒಳನುಸುಳುವವರನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಪ್ರದೇಶದಿಂದ 800 ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ‌

ಅಹಮದಾಬಾದ್ ಮಹಾನಗರ ಪಾಲಿಕೆಯು ಧ್ವಂಸ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದರೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಜಂಟಿ ಪೊಲೀಸ್ ಆಯುಕ್ತ-ಅಪರಾಧ ಶರದ್ ಸಿಂಘಾಲ್ ನೇತೃತ್ವದಲ್ಲಿ ಸುಮಾರು 3,000 ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಹೇಳಿದರು.

ಇತ್ತೀಚೆಗೆ, ಎಎಂಸಿ ನಡೆಸಿದ ಸಮೀಕ್ಷೆಯಲ್ಲಿ ಸರ್ಕಾರಿ ಭೂಮಿಯನ್ನು ಮತ್ತೆ ಅತಿಕ್ರಮಿಸಲಾಗಿದೆ ಮತ್ತು ಸರೋವರದ ಸುತ್ತಲೂ ಗುಡಿಸಲುಗಳನ್ನು ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ಅಕ್ರಮ ಬಾಂಗ್ಲಾದೇಶಿ ವಲಸಿಗರು ಈ ಸರೋವರದ ಸುತ್ತಮುತ್ತಲಿನ ಸಿಯಾಸತ್‌ನಗರ ಮತ್ತು ಬಂಗಾಳಿ ವಾಸ್‌ನಂತಹ ಪ್ರದೇಶಗಳಲ್ಲಿ ವಾಸಿಸುತ್ತಿದ್ದರುಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!