ಸೆಹ್ವಾಗ್ ಗೆ ರಿವರ್ಸ್ ಕೌಂಟರ್ ನೀಡಿದ ವೈಭವ್ ಸೂರ್ಯವಂಶಿ: ಅಷ್ಟಕ್ಕೂ ಟೀಂ ಇಂಡಿಯಾ ದಿಗ್ಗಜ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗ ಎಲ್ಲರ ಬಾಯಲ್ಲೂ 14 ರ ಪೋರ ವೈಭವ್ ಸೂರ್ಯವಂಶಿಯದ್ದೇ ಮಾತು. ಗುಜರಾತ್ ಟೈಟಾನ್ಸ್ ವಿರುದ್ಧ ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 101 ರನ್ ಗಳಿಸಿ ವಿಧ್ವಂಸ ಸೃಷ್ಟಿಸಿದ್ದರು.

ಇದಕ್ಕೂ ಮುನ್ನ ಟೀಂ ಇಂಡಿಯಾ ದಿಗ್ಗಜ ವೀರೇಂದ್ರ ಸೆಹ್ವಾಗ್ ಸೂರ್ಯವಂಶಿ ಕುರಿತು ಕೆಲವೊಂದು ಹೇಳಿಕೆಗಳನ್ನ ನೀಡಿದ್ದರು. ಈ ಹೇಳಿಕೆಯನ್ನು ಕೇವಲ 100 ಗಂಟೆಯಲ್ಲಿ ವೈಭವ್ ಸೂರ್ಯವಂಶಿ ತಪ್ಪು ಎಂದು ಸಾಬೀತು ಪಡಿಸಿದ್ದಾರೆ.

ಸೆಹ್ವಾಗ್ ಹೇಳಿದ್ದೇನು?
ಏಪ್ರಿಲ್ 24 ರಂದು ರಾಜಸ್ಥಾನ ತಂಡವು ಆರ್‌ಸಿಬಿ ವಿರುದ್ಧ ಪಂದ್ಯವನ್ನು ಆಡಿತು. ಆ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಬೇಗನೇ ಔಟ್ ಆಗಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸೆಹ್ವಾಗ್, ವೈಭವ್​ ಡೆಬ್ಯೂ ತುಂಬಾ ಚೆನ್ನಾಗಿ ಆಯ್ತು. ಮೊದಲ ಎಸೆತದಲ್ಲೇ ವೈಭವ್ ಸಿಕ್ಸರ್ ಬಾರಿಸಿದ್ದರು. ಆದರೆ ಮುಂದಿನ ವರ್ಷ ಆತ ಆಡುವುದಿಲ್ಲ ಎಂದರೆ ಅಚ್ಚರಿಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು.

ಕೇವಲ ಒಂದು ಅಥವಾ ಎರಡು ಪಂದ್ಯಗಳಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿ ಖ್ಯಾತಿ ಪಡೆದ ಅನೇಕ ಆಟಗಾರರನ್ನು ನಾನು ನೋಡಿದ್ದೇನೆ. ಏಕೆಂದರೆ ಒಂದು ಎರಡು ಪಂದ್ಯಗಳ ಬಳಿಕ ಅವರು ತಾವು ಸ್ಟಾರ್ ಆಗಿದ್ದಾರೆಂದು ಭಾವಿಸುತ್ತಾರೆ ಎಂದು ಸೆಹ್ವಾಗ್ ಹೇಳಿದ್ದರು.

ಸೆಹ್ವಾಗ್ ಈ ಹೇಳಿಕೆಗೆ ವೈಭವ್ ಸೂರ್ಯವಂಶಿ ತನ್ನ ಬ್ಯಾಟಿಂಗ್ ಮೂಲಕ ತಿರುಗೇಟು ನೀಡಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!