ಉದ್ಯಾನವನಗಳಲ್ಲಿ ಗುಂಪುಗೂಡಿ ಜೋರಾಗಿ ನಗುವವರನ್ನು ನಾವು ನೋಡಿರುತ್ತೇವೆ. ಅವರು ಹೀಗೆ ಮಾಡೋದನ್ನು ನೋಡಿದಾಗ, ನಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಕಾಡೊದಕ್ಕೆ ಶುರುವಾಗುತ್ತೆ?ಯಾಕೆ ಇವರು ಹೀಗೆ ನಗ್ತಿದ್ದಾರೆ? ಅದರ ಪ್ರಯೋಜನಗಳೇನು? ಎಂದು. ಇವತ್ತು ನಾವು ಜೋರಾಗಿ ಮನಸ್ಸು ಬಿಚ್ಚಿ ನಗೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ.
ಒತ್ತಡ ಕಡಿಮೆ ಮಾಡುವುದು
ಮನಃಪೂರ್ವಕವಾಗಿ ನಗೋದ್ರಿಂದ ಉದ್ವಿಗ್ನತೆಗಳು ಮತ್ತು ಒತ್ತಡವು ಕ್ಷಣಾರ್ಧದಲ್ಲಿ ಮಾಯವಾಗಬಹುದು. ನಗುವುದು ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತೆ.
ಸಕಾರಾತ್ಮಕ ಮನೋಭಾವ
ನಗು ಸಕಾರಾತ್ಮಕ ಭಾವನೆಗಳನ್ನು ಉತ್ತೇಜಿಸುತ್ತದೆ ಮತ್ತು ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಬೆಳೆಸುತ್ತದೆ.
ದೈಹಿಕ ಪ್ರಯೋಜನಗಳು
ನಗುವುದರಿಂದ ದೇಹದಲ್ಲಿ ಎಂಡಾರ್ಫಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ದೇಹದಲ್ಲಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ
ಮನಪೂರ್ವಕವಾಗಿ ನಗುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ.
ಉಸಿರಾಟವನ್ನು ಸುಧಾರಿಸುತ್ತದೆ
ಜೋರಾಗಿ ನಗುವುದರಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾಗುತ್ತದೆ ಮತ್ತು ಉಸಿರಾಟವು ಸುಧಾರಿಸುತ್ತದೆ.
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ
ನಗುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ಹೃದ್ರೋಗ ಮತ್ತು ಕೊಲೆಸ್ಟ್ರಾಲ್ನಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.