ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೈಲೇಶ್ ಕೊಲನು ನಿರ್ದೇಶನದ ಮತ್ತು ನಾನಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆಕ್ಷನ್ ಥ್ರಿಲ್ಲರ್ ಚಿತ್ರ ‘ಹಿಟ್ 3 ‘ ಮೇ 1 ರಂದು ಬಿಡುಗಡೆಯಾಗಿದ್ದು, ಮೊದಲ ದಿನವೇ ಉತ್ತಮ ಗಳಿಕೆ ಕಂಡಿದೆ.
‘ಹಿಟ್ 3 ‘ ಮೊದಲ ದಿನ ವಿಶ್ವದಾದ್ಯಂತ 43 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ಈ ಚಿತ್ರವು ನಾನಿಯವರ ವೃತ್ತಿಜೀವನದ ಮೊದಲ ದಿನದಂದು ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರವಾಗಿದೆ. ವಿದೇಶಗಳಲ್ಲಿಯೂ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿರುವ ಹಿಟ್ 3, ತನ್ನ ಮೊದಲ ದಿನವೇ $1 ಮಿಲಿಯನ್ ಕ್ಲಬ್ ಸೇರಿದೆ. ಈ ವಾರಾಂತ್ಯದಲ್ಲಿಯೇ ಇದು 2 ಮಿಲಿಯನ್ ಡಾಲರ್ ಗಳಿಸುವ ಸಾಧ್ಯತೆಯಿದೆ ಎಂದು ಟ್ರೇಡ್ ವಿಶ್ಲೇಷಕರು ಹೇಳುತ್ತಿದ್ದಾರೆ.
ಹಿಟ್ 3 ರಲ್ಲಿ, ನಾನಿ ತಮ್ಮ ಸ್ಟೈಲಿಶ್ ಲುಕ್ ಮತ್ತು ಮಾಸ್ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಮೂಲಕ ಮತ್ತೊಮ್ಮೆ ಹಿಟ್ ಸರಣಿ ಸೂಪರ್ ಹಿಟ್ ಎಂದು ಸಾಬೀತಾಗಿದೆ.