ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗಿನ ನ್ಯಾಚುರಲ್ ಸ್ಟಾರ್ ನಟ ನಾನಿ, ನಟಿ ಶ್ರೀನಿಧಿ ಶೆಟ್ಟಿ ನಟಿಸಿರುವ ಕ್ರೈಂ ಥ್ರಿಲ್ಲರ್ ಸಿನಿಮಾ ‘ಹಿಟ್ 3’ ಕೆಲ ದಿನದ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ, ನಿರೀಕ್ಷೆಗಳೊಟ್ಟಿಗೆ ಬಿಡುಗಡೆ ಆದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆದ್ದಿತಾ ಅಥವಾ ಸೋತಿತಾ?
‘ಹಿಟ್ 3’ ಸಿನಿಮಾ ಬಿಡುಗಡೆ ಆದ ದಿನ ಮಿಶ್ರ ಪ್ರತಿಕ್ರಿಯೆಗಳು ಹೆಚ್ಚಾಗಿ ಕೇಳಿ ಬಂದವು. ಅದರಲ್ಲೂ ಬಹುತೇಕರು ಸಿನಿಮಾ ನಿರೀಕ್ಷೆಗೆ ತಕ್ಕಂತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಹಲವರಿಗೆ ಸಿನಿಮಾದಲ್ಲಿದ್ದ ಭರ್ಜರಿ ಆಕ್ಷನ್ ಬಹಳ ಇಷ್ಟವಾಯ್ತು. ನಾನಿಯ ನಟನೆಯ ಬಗ್ಗೆಯೂ ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾದವು.
ಗುರುವಾರ ಬಿಡುಗಡೆ ಆದ ‘ಹಿಟ್ 3’ ಸಿನಿಮಾ ಎರಡು ದಿನಕ್ಕೆ ಬಾಕ್ಸ್ ಆಫೀಸ್ನಲ್ಲಿ 62 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಸ್ವತಃ ಚಿತ್ರತಂಡ ಹೇಳಿಕೊಂಡಿದೆ. ಆ ಮೂಲಕ ನೂರು ಕೋಟಿ ಕ್ಲಬ್ ಸೇರುವ ಸ್ಪಷ್ಟ ಸೂಚನೆಯನ್ನು ‘ಹಿಟ್ 3’ ಸಿನಿಮಾ ನೀಡಿದೆ.