ಪಹಲ್ಗಾಮ್ ದಾಳಿಯ ಉಗ್ರ ಪರಾರಿ ಶಂಕೆ: ಶ್ರೀಲಂಕಾದಲ್ಲಿ ಚೆನ್ನೈನಿಂದ ಬಂದ ವಿಮಾನಕ್ಕೆ ರೌಂಡಪ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶಂಕಿತ ಭಯೋತ್ಪಾದಕರು ಚೆನ್ನೈ ಮಲಕ ಶ್ರೀಲಂಕಾಗೆ ಪ್ರಯಾಣಿಸುತ್ತಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಶ್ರೀಮಳಕಾ ಏರ್‌ಲೈನ್ಸ್‌ಗೆ ಸೇರಿದ ವಿಮಾನವನ್ನು ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಭದ್ರತಾ ಪಡೆ ಸುತ್ತುವರಿದು ತಪಾಸಣೆಗೆ ಒಳಪಡಿಸಿದೆ.

ಬೆಳಿಗ್ಗೆ ೧೧.೫೯ಕ್ಕೆ ಚೆನ್ನೈನಿಂದ ಕೊಲಂಬೊಗೆ ಬಂದಿಳಿದ ಈ ವಿಮಾನದಲ್ಲಿ ಪಹಲ್ಗಾಮ್ ದಾಳಿಗೆ ಸಂಬಂಧಿಸಿ ಉಗ್ರರು ಪರಾರಿಯಾಗುತ್ತಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಈ ಶೋಧ ನಡೆದಿದೆ.

ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಸಂಭಾವ್ಯ ಶಂಕಿತರನ್ನು ಭಾರತೀಯ ಗುಪ್ತಚರ ಇಲಾಖೆ ಈಗಾಗಲೇ ಗುರುತಿಸಿದ್ದು, ಚೆನ್ನೈನಿಂದ ಬಂದ ಈ ವಿಮಾನದಲ್ಲಿ ೬ ಶಂಕಿತ ಭಯೋತ್ಪಾದಕರು ಇರುವ ಬಗ್ಗೆ ಭಾರತದಿಂದ ಬಂದ ಎಚ್ಚರಿಕೆ ಬಂದ ನಂತರ ಶೋಧ ನಡೆಸಲಾಗಿದೆ ಎಂದು ಶ್ರೀಲಂಕಾ ಭದ್ರತಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!