ಪಾಕ್‌ಗೆ ಮತ್ತೊಂದು ಮರ್ಮಾಘಾತ: ಭಾರತ-ಪಾಕ್ ನಡುವಿನ ಜಲಮಾರ್ಗ ಕಂಪ್ಲೀಟ್ ಬಂದ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ಉಗ್ರ ದಾಳಿಯ ಬೆನ್ನಿಗೇ ಪಾಕಿಸ್ತಾನಕ್ಕೆ ಬ್ಯಾಕ್ ಟೂ ಬ್ಯಾಕ್ ಶಾಕ್ ನೀಡುತ್ತಿರುವ ಭಾರತ ಈಗ ಪಾಕ್‌ಗೆ ಜಲಮಾರ್ಗ ಬಂದ್ ಮಾಡುವ ಮೂಲಕ ಹೋಗುವ ಹಾಗೂ ಬರುವ ಹಡಗುಗಳಿಗೆ ನಿರ್ಬಂಧ ವಿಧಿಸಿ ಮತ್ತೊಂದು ಮರ್ಮಾಘಾತ ನೀಡಿದೆ.

ಈ ಬಗ್ಗೆ ಸಚಿವಾಲಯ ಆದೇಶ ಹೊರಡಿಸಿದ್ದು, ದೇಶದ ಆಸ್ತಿ, ಸರಕು ಮತ್ತು ಬಂದರು ಮೂಲಸೌಕರ್ಯ ರಕ್ಷಿಸಲು ೧೯೫೮ರ ಮರ್ಚೆಂಟ್ ಶಿಪ್ಪಿಂಗ್ ಕಾಯ್ದೆಯ ಸೆಕ್ಷನ್ ೪೧೧ರ ಅಡಿಯಲ್ಲಿ ತಕ್ಷಣದಿಂದ ಈ ನಿರ್ಬಂಧ ಜಾರಿಗೆ ಬರುತ್ತಿದೆ ಎಂದು ಹೇಳಿದೆ.

ಇದರಿಂದಾಗಿ ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳು ಭಾರತೀಯ ಬಂದರುಗಳಿಗೆ ಪ್ರವೇಶಿಸುವುದಕ್ಕೆ ಹಾಗೂ ಭಾರತೀಯ ಧ್ವಜ ಹೊಂದಿರುವ ಹಡಗುಗಳು ಪಾಕಿಸ್ತಾನದ ಬಂದರುಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!