ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಸೋನು ನಿಗಮ್ ಮೇಲೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಸ್ಫಷ್ಟನೇ ನೀಡಿರುವ ಗಾಯಕ, ಕನ್ನಡ.. ಕನ್ನಡ’ ಎಂದು ಪ್ರೀತಿಯಿಂದ ಕರೆಯುವುದಕ್ಕೂ ‘ಕನ್ನಡ.. ಕನ್ನಡ’ ಎಂದು ಧಮ್ಕಿ ಹಾಕುವುದಕ್ಕೂ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶದ ಮೂಲಕ ಮಾತನಾಡಿರುವ ಸೋನು ನಿಗಮ್, ವೇದಿಕೆ ಬಳಿ ನಾಲ್ಕೈದು ಜನರು ಇದ್ದರು, ತುಂಬಾ ಕಿರುಚಾಡುತ್ತಿದ್ದರು. ಶೋಗೆ ತುಂಬಾ ತೊಂದರೆ ಮಾಡುತ್ತಿದ್ದರು. ಪಹಲ್ಗಾಮ್‌ನಲ್ಲಿ ಪ್ಯಾಂಟ್ ಕಳಚುವಾಗ ಭಾಷೆ ಕೇಳಿಲ್ಲ ಎಂಬುದನ್ನು ಅವರಿಗೆ ಹೇಳೋದು ಅನಿವಾರ್ಯವಾಗಿತ್ತು. ಯಾವುದೇ ರಾಜ್ಯಕ್ಕೆ ಹೋದರೂ, ಎಲ್ಲಿಯೇ ಹೋದರು ಈ ರೀತಿಯ ಕೆಲವು ಕೆಟ್ಟವರು ಇದ್ದೇ ಇರ್ತಾರೆ. ಜಗತ್ತು ಪ್ರೀತಿಯಿಂದ ನಿಮ್ಮ ಜೊತೆ ನಡೆದುಕೊಳ್ಳುವಾಗ ಯಾರೊಬ್ಬರೂ ಬೆದರಿಕೆ ಹಾಕಬಾರದು ಎಂದು ಹೇಳಿದ್ದಾರೆ.
ಶೋ ಸಮಯದಲ್ಲಿ ನಾನು ಹಾಡುವಾಗ, ಆ ಕೆಲವು ಜನರು ಬೆದರಿಕೆ ಹಾಕುವಂತೆ ಕಿರುಚಾಡುತ್ತಿದ್ದರು. ಹಾಡು ಹೇಳಿ ಹೇಳಿ ಎಂದು. ಎಲ್ಲ ಕನ್ನಡಿಗರೂ ಹಾಗೆ ಅಲ್ಲ. ಕನ್ನಡಿಗರು ಒಳ್ಳೆಯವರು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರಿನ ಕಾಲೇಜುವೊಂದಕ್ಕೆ ಇತ್ತೀಚೆಗೆ ಸೋನು ನಿಗಮ್ ಬಂದಿದ್ದರು. ಈ ವೇಳೆ ಯುವಕನೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿಕೊಂಡಿದ್ದನಂತೆ. ಆದರೆ ಇಷ್ಟು ಹೇಳಿದ್ದೇ ತಡ ಸೋನು ನಿಗಮ್ ಸಿಟ್ಟು ನೆತ್ತಿಗೇರಿ, ಹಾಡುತ್ತಿದ್ದ ಹಾಡನ್ನೇ ಅರ್ಧಕ್ಕೆ ನಿಲ್ಲಿಸಿ, ‘ಕನ್ನಡ, ಕನ್ನಡ.. ಇದೇ ಕಾರಣದಿಂದ ಪಹಲ್ಗಾಮ್‌ನಲ್ಲಿ ದಾಳಿಯಾಗಿದ್ದು’ ಎಂದು ಹೇಳಿದ್ದಾರೆ.