ಸಾಮಾನ್ಯವಾಗಿ ನಾವು ಸ್ನಾನ ಮಾಡೋ ಸೋಪ್ ಅಥವಾ ಬಟ್ಟೆ ಒಗೆಯುವ ಸೋಪ್ ಪಿಂಕ್, ನೀಲಿ, ಹಳದಿ ಹೀಗೆ ಹಲವಾರು ಬಣ್ಣದಲ್ಲಿರುತ್ತದೆ. ಆದರೆ ಯಾವತ್ತಾದ್ರೂ ಯೋಚಿಸಿದ್ದೀರಾ, ಈ ಬಣ್ಣ ಬಣ್ಣದ ಸೋಪುಗಳ ನೊರೆ ಮಾತ್ರ ಯಾವಾಗಲೂ ಬಿಳಿಯಾಗಿರುತ್ತದೆ ಎಂದು. ಇದಕ್ಕೆ ವೈಜ್ಞಾನಿಕ ಉತ್ತರವಿದೆ ನೋಡಿ.
ಬೆಳಕು ಸೋಪ್ ದ್ರಾವಣವನ್ನು ಪ್ರವೇಶಿಸಿದಾಗ, ಅದು ಅನೇಕ ಸಣ್ಣ ಗುಳ್ಳೆಗಳ ಮೂಲಕ ಹಾದುಹೋಗುತ್ತದೆ, ಅಂದರೆ ಅನೇಕ ಮೇಲ್ಮೈಗಳು ವಿವಿಧ ದಿಕ್ಕುಗಳಲ್ಲಿ ಬೆಳಕನ್ನು ಹರಡುತ್ತವೆ. ಈ ಕಾರಣದಿಂದಾಗಿ ಒಳಗಿನ ಬೆಳಕಿನ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಹೀಗಾಗಿ ಫೋಮ್ ಬೆಳ್ಳಗೆ ಗೋಚರಿಸುತ್ತದೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಬೂನುಗಳು ಮತ್ತು ಶ್ಯಾಂಪೂಗಳನ್ನು ಮಾಡಲು ಬಳಸುವ ಬಣ್ಣಗಳು ತುಂಬಾ ದುರ್ಬಲವಾಗಿರುತ್ತವೆ. ಹೀಗಾಗಿ ಸೋಪ್ಗೆ ಬಳಸುವ ಬಣ್ಣ ಮುಂದೆ ನೊರೆಯಾದಾಗ ಅದರ ಬಣ್ಣ ಬದಲಾಗುವಷ್ಟು ಇರುವುದಿಲ್ಲ. ಈ ಕಾರಣದಿಂದಾಗಿ ಫೋಮ್ ಸಂಪೂರ್ಣವಾಗಿ ಬಿಳಿಯಾಗಿ ಕಾಣುತ್ತದೆ.