ಸಿಂಧೂ ಜಲ ಒಪ್ಪಂದ ಉಲ್ಲಂಘಿಸಿ ಡ್ಯಾಮ್ ನಿರ್ಮಿಸಿದರೆ ಧ್ವಂಸಗೊಳಿಸುತ್ತೇವೆ: ಪಾಕ್ ರಕ್ಷಣಾ ಸಚಿವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ದಾಳಿ ಬಳಿಕ ಭಾರತ ಸಿಂಧೂ ನದಿ ನೀರಿನ ಒಪ್ಪಂದ ರದ್ದು ಮಾಡಿ, ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಭಾರತ ತಡೆ ಹಿಡಿದಿತ್ತು.

ಇದೀಗ ಭಾರತ ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿ ಯಾವುದೇ ಡ್ಯಾಮ್ ನಿರ್ಮಿಸಿದರೆ ಇಸ್ಲಾಮಾಬಾದ್ ಅದನ್ನು ಧ್ವಂಸಗೊಳಿಸಲಿದೆ ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಶುಕ್ರವಾರ ಹೇಳಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿದ ಆಸಿಫ್, ಸಿಂಧೂ ನದಿಗೆ ಅಡ್ಡವಾಗಿ ಯಾವುದೇ ಮೂಲಸೌಕರ್ಯ ನಿರ್ಮಿಸುವುದನ್ನು ಭಾರತದ ಆಕ್ರಮಣ ಎಂದು ಪರಿಗಣಿಸಲಾಗುತ್ತದೆ.ಜೊತೆಗೆ ಬಲವಾದ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಆಸಿಫ್ ಹೇಳಿದ್ದಾರೆ.

ಆಕ್ರಮಣವು ಕೇವಲ ಫಿರಂಗಿ ಅಥವಾ ಗುಂಡುಗಳನ್ನು ಹಾರಿಸುವುದರ ಮೂಲಕ ಅಲ್ಲ,ಅದಕ್ಕೆ ಹಲವು ಮುಖಗಳಿವೆ. ಆ ಮುಖಗಳಲ್ಲಿ ಸಿಂಧೂ ನದಿ ನೀರನ್ನು ತಡೆಯುವುದು ಅಥವಾ ತಿರುಗಿಸುವುದು ಒಂದು. ಇದರಿಂದ ಪಾಕಿಸ್ತಾನದಲ್ಲಿ ಹಸಿವು ಮತ್ತು ಬಾಯಾರಿಕೆಯಿಂದ ಜನರ ಸಾವುಗಳಿಗೆ ಕಾರಣವಾಗಬಹುದು ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!