CINE | OTT ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ‘ರಾಬಿನ್ ಹುಡ್’: ಎಲ್ಲಿ ಸ್ಟ್ರೀಮಿಂಗ್‌ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆಂಕಿ ಕುಡುಮುಲ ನಿರ್ದೇಶನದ, ನಿತೀನ್ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ “ರಾಬಿನ್ ಹುಡ್” ಸಿನಿಮಾ ನಿರೀಕ್ಷೆಗೆ ತಕ್ಕಂತೆ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಗಳಿಸುವಲ್ಲಿ ವಿಫಲವಾಗಿದೆ.

ಆದರೆ ಈಗ ಈ ಚಿತ್ರ OTT ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. Zee5 ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಮೇ 10 ರಿಂದ Zee5 ನಲ್ಲಿ ಚಿತ್ರ ಸ್ಟ್ರೀಮಿಂಗ್ ಆಗಲಿದೆ ಎಂದು ತಿಳಿದುಬಂದಿದೆ.

ಈ ಚಿತ್ರದಲ್ಲಿ ಶ್ರೀ ಲೀಲಾ ಅವರ ಪಾತ್ರ ಸೀಮಿತವಾಗಿದ್ದರೂ, ಅವರು ಕೆಲವು ದೃಶ್ಯಗಳಲ್ಲಿ ತಮ್ಮ ನಟನೆ ಮೂಲಕ ಫ್ಯಾನ್ಸ್‌ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಡೇವಿಡ್ ವಾರ್ನರ್ ಬಹಳ ಕಡಿಮೆ ಸಮಯ ಕಾಣಿಸಿಕೊಂಡಿದ್ದಾರೆ, ಶುಭಲೇಖಾ ಸುಧಾಕರ್, ಲಾಲ್, ವೆನ್ನೆಲ ಕಿಶೋರ್ ಮತ್ತು ರಾಜೇಂದ್ರ ಪ್ರಸಾದ್ ಅವರಂತಹ ನಟರು ತಮ್ಮ ಪಾತ್ರಗಳನ್ನ ಉತ್ತಮವಾಗಿ ನಿಭಾಯಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!