ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಆರು ಮಹಿಳೆಯರು ಸೇರಿದಂತೆ 10 ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮಂಡವಾಲಿ ಪೊಲೀಸ್ ಠಾಣೆಯಲ್ಲಿ ದೊರೆತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಮೊದಲಿಗೆ ಬಾಂಗ್ಲಾದೇಶದ ಮಹಿಳೆಯೊಬ್ಬರನ್ನು ಬಂಧಿಸಲಾಯಿತು. ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಪಹರ್‌ಗಂಜ್ ಪ್ರದೇಶದಲ್ಲಿ ಐದು ಬಾಂಗ್ಲಾ ಮಹಿಳೆಯರು ಇರುವುದನ್ನು ಬಹಿರಂಗಪಡಿಸಿದರು. ತದನಂತರ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸ್ ಉಪ ಆಯುಕ್ತ (ಪೂರ್ವ) ಅಭಿಷೇಕ್ ಧನಿಯಾ ಮಾಹಿತಿ ನೀಡಿದ್ದಾರೆ.
ಆ ಮಹಿಳೆಯರ ಬಳಿ ಯಾವುದೇ ಮಾನ್ಯವಾದ ವೀಸಾ, ಪಾಸ್‌ಪೋರ್ಟ್ ಅಥವಾ ಪರವಾನಗಿಗಳು ಇರಲಿಲ್ಲ. ಸದ್ಯ ಮಹಿಳೆಯರನ್ನು ಸುರಕ್ಷಿತ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ ವಾಯುವ್ಯ ದೆಹಲಿಯ ಆಜಾದ್‌ಪುರ ಸಬ್ಜಿ ಮಂಡಿ ಪ್ರದೇಶದಿಂದ ತೃತೀಯಲಿಂಗಿಗಳ ವೇಷದಲ್ಲಿದ್ದ ನಾಲ್ವರು ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.