PARENTING | ಮಕ್ಕಳಲ್ಲಿ ಸಿಟ್ಟು, ಒತ್ತಡ ಕಡಿಮೆ ಮಾಡಬೇಕು ಅಂತಿದ್ರೆ ಇವತ್ತಿಂದಲೇ ಧ್ಯಾನ ಕಲಿಸಿ!

ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ, ಒತ್ತಡ, ಆತಂಕ ನಿವಾರಣೆಯಾಗುತ್ತದೆ. ದೊಡ್ಡವರಾದರು ಸರಿ, ಮಕ್ಕಳಾದರು ಸರಿ ಧ್ಯಾನ ಹಟ, ಸಿಟ್ಟನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಇವತ್ತು ನಾವು ನಿಮ್ಮ ಎಳೆಯ ಮಕ್ಕಳಿಗೆ ಧ್ಯಾನವನ್ನು ಕಲಿಸುವುದರಿಂದ ಏನೆಲ್ಲಾ ಪ್ರಯೋಜನವಾಗುತ್ತೆ ಎಂದು ತಿಳಿದುಕೊಳ್ಳೋಣ.

ಉತ್ತಮ ನಡುವಳಿಕೆಗೆ ಸಹಾಯಕ
ಧ್ಯಾನವು ಮಕ್ಕಳಿಗೆ ಅಗತ್ಯವಿರುವ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಶಾಲೆಯ ದಿನಚರಿಗಳಲ್ಲಿ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಏಕಾಗ್ರತೆ, ಗ್ರಹಿಸುವ ಕೌಶಲ, ಉತ್ತಮ ನಡುವಳಿಕೆ ಮಕ್ಕಳಲ್ಲಿ ಬರುತ್ತದೆ.

ಗಮನ ಕೇಂದ್ರೀಕರಣ
ಧ್ಯಾನ ಒಂದು ಮಾನಸಿಕ ವ್ಯಾಯಾಮವಾಗಿದೆ. ಅದು ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಒತ್ತಡ ನಿವಾರಣೆ
ಬಾಲ್ಯದಲ್ಲಿಯೇ ಧ್ಯಾನ ರೂಢಿಸಿಕೊಂಡರೆ ಒತ್ತಡವನ್ನು ಸರಿಯಾಗಿ ನಿಭಾಯಿಸಬಹುದಾದ ಕಲೆ ಅವರಲ್ಲಿ ಹೆಚ್ಚಾಗುತ್ತದೆ.

ಮಾನಸಿಕ ಆರೋಗ್ಯ ಬಲಪಡಿಸುತ್ತದೆ
ನಿಯಮಿತವಾಗಿ ಮಾಡುವ ಧ್ಯಾನ ಮಕ್ಕಳಲ್ಲಿ ಮಾನಸಿಕ ಆರೋಗ್ಯ ಬಲಪಡಿಸುತ್ತದೆ. ಒತ್ತಡ, ಆತಂಕ ನಿಭಾಯಿಸುವ ಸಾಮರ್ಥ್ಯ ತಂದುಕೊಡುತ್ತದೆ. ಇದರಿಂದ ಮಕ್ಕಳು ಸ್ವಯಂ ಅರಿವು, ಆಲೋಚನೆ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here