ಪಾಕ್ ಗೆ ಮತ್ತೊಂದು ಶಾಕ್ ಕೊಟ್ಟ ಭಾರತ: ಇಮ್ರಾನ್ ಖಾನ್, ಬಿಲಾವಲ್ ಭುಟ್ಟೋ X ಖಾತೆಗೂ ಲಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಒಂದರ ಮೇಲೊಂದು ಭಾರತದಿಂದ ಪ್ರತೀಕಾರದ ಭೀತಿ ಎದುರಿಸುತ್ತಿರುವ ಪಾಕ್ ಗೆ ಈಗ ಮತ್ತೊಂದು ಶಾಕ್ ಎದುರಾಗಿದೆ.

ಈಗಾಗಲೇ ಹಲವರ ಎಕ್ಸ್ ಖಾತೆ ಗೆ ನಿರ್ಬಂಧ ಹೇರಿದ್ದಭಾರತ ಸರಕಾರ ಇದೀಗ ಮಾಜಿ ಪ್ರಧಾನಿ ಮತ್ತು ಪಿಟಿಐ ನಾಯಕ ಇಮ್ರಾನ್ ಖಾನ್ ಅವರ ಎಕ್ಸ್ ಖಾತೆಯನ್ನು ನಿರ್ಬಂಧಿಸಿದೆ. ಇಮ್ರಾನ್ ಖಾನ್ ಜೊತೆಗೆ ಮಾಜಿ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಮತ್ತು ಗಾಯಕ ಅತಿಫ್ ಅಸ್ಲಾಂ ಅವರ ಖಾತೆಗಳನ್ನು ಸಹ ನಿರ್ಬಂಧಿಸಲಾಗಿದೆ.

ಕಾನೂನು ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ ಇಬ್ಬರೂ ಪಾಕಿಸ್ತಾನಿ ರಾಜಕಾರಣಿಗಳ X ಖಾತೆಗಳನ್ನು ನಿರ್ಬಂಧಿಸಲಾಗಿದೆ. ಗಾಯಕ ಅತಿಫ್ ಅಸ್ಲಾಂ ಅವರ ಇನ್‌ಸ್ಟಾಗ್ರಾಮ್‌ನಲ್ಲೂ ಇದೇ ರೀತಿಯ ಸಂದೇಶ ಗೋಚರಿಸುತ್ತಿದೆ.

ಈ ವಾರದ ಆರಂಭದಲ್ಲಿ, ಕೇಂದ್ರ ಸರ್ಕಾರವು ಭಾರತದಲ್ಲಿ ಹನಿಯಾ ಆಮಿರ್, ಮಹಿರಾ ಖಾನ್, ಅಲಿ ಜಾಫರ್, ಸನಮ್ ಸಯೀದ್, ಬಿಲಾಲ್ ಅಬ್ಬಾಸ್, ಇಕ್ರಾ ಅಜೀಜ್, ಇಮ್ರಾನ್ ಅಬ್ಬಾಸ್ ಮತ್ತು ಸಜಲ್ ಅಲಿ ಸೇರಿದಂತೆ ಹಲವಾರು ಪಾಕಿಸ್ತಾನಿ ನಟರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿರ್ಬಂಧಿಸಿತ್ತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!