ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಪ್ರಚಾರ ಚಿತ್ರವಾಗಲಿ, ನಾನು ಯಾವುದೇ ಸಿನಿಮಾ ನಿಷೇಧವನ್ನು ಬೆಂಬಲಿಸುವುದಿಲ್ಲ. ಜನರು ಅದನ್ನು ನಿರ್ಧರಿಸಲಿ. ಜನರಿಗೆ ಹಕ್ಕಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ (2018), ಶಾರುಖ್ ಖಾನ್ ಅಭಿನಯದ ಪಠಾಣ್ (2023), ಮತ್ತು ಇತ್ತೀಚೆಗೆ ಪೃಥ್ವಿರಾಜ್ ಸುಕುಮಾರನ್ ಅವರ L2: ಎಂಪುರಾನ್ ಮತ್ತು ಫವಾದ್ ಖಾನ್ ಅಭಿನಯದ ಅಬೀರ್ ಗುಲಾಲ್ ಚಿತ್ರಗಳ ಉದಾಹರಣೆಗಳನ್ನು ನಟ ಉಲ್ಲೇಖಿಸಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅಶ್ಲೀಲತೆ ಅಥವಾ ಮಕ್ಕಳ ಮೇಲಿನ ದೌರ್ಜನ್ಯದ ಬಗೆಗಿನ ಸಿನಿಮಾ ಹೊರತು, ನೀವು ಸಿನಿಮಾಗಳನ್ನು ನಿಷೇಧಿಸಲು ಸಾಧ್ಯವಿಲ್ಲ.
ಈ ದೇಶದಲ್ಲಿ ಕೆಲವು ಚಲನಚಿತ್ರಗಳು ತಯಾರಾಗುತ್ತಿಲ್ಲ. ಸೆನ್ಸಾರ್ಶಿಪ್ ಇರುವುದರಿಂದ ಕೆಲವು ಸಿನಿಮಾ ಆಗುವುದಿಲ್ಲ. ರಾಜ್ಯ ಸೆನ್ಸಾರ್ಶಿಪ್ ಇತ್ತು. ಈಗ, ಅವರು ಅದನ್ನು ಸ್ಪಷ್ಟವಾಗಿ ಕೇಂದ್ರ ಸೆನ್ಸಾರ್ಶಿಪ್ ಗೆ ತಂದಿದ್ದಾರೆ. ಏನು ಮಾಡಬೇಕೆಂದು ಅವರು ನಿರ್ಧರಿಸುತ್ತಾರೆ. ಚಲನಚಿತ್ರೋದ್ಯಮವು ಬಹಳ ದುರ್ಬಲ ಉದ್ಯಮವಾಗಿದೆ ಎಂದು ಹೇಳಿದ್ದಾರೆ.