ಜೇನುನೊಣದೊಂದಿಗೆ ಅಂಜೂರದ ಹಣ್ಣುಗಳು ನಡೆಸುವ ವಿಶಿಷ್ಟ ಪರಾಗಸ್ಪರ್ಶ ಪ್ರಕ್ರಿಯೆಯಿಂದಾಗಿ ಅವುಗಳು ಸಸ್ಯಾಹಾರಿಯೋ ಅಥ್ವಾ ಮಾಂಸಾಹಾರಿಯೋ ಎಂಬುದರ ಕುರಿತು ಬಹಳಷ್ಟು ಚರ್ಚೆ ನಡೆಯುತ್ತಿದೆ. ಈ ಹಣ್ಣು “ಮಾಂಸಾಹಾರಿ” ರೀತಿಯಲ್ಲಿ ಬೆಳೆಯುವುದರಿಂದ ಸಸ್ಯಾಹಾರಿಗಳಿಗೆ ಸೂಕ್ತವೆಂದು ಪರಿಗಣಿಸಬಾರದು ಎಂದು ಹಲವರು ಹೇಳಿಕೊಂಡಿದ್ದಾರೆ.
ಅಂಜೂರದ ಪರಾಗಸ್ಪರ್ಶ ಹೇಗೆ
ಅಂಜೂರ ಸಸ್ಯ ಪರಾಗಸ್ಪರ್ಶ ಹೊಂದುತ್ತದೆಯೋ ಆಗ ಜೇನುನೊಣ ಈ ಅಂಜೂರದಲ್ಲಿ ಪ್ರವೇಶ ಪಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ತನ್ನ ರೆಕ್ಕೆಗಳನ್ನು ಅದು ಕಳೆದುಕೊಳ್ಳುತ್ತದೆ. ಪರಾಗ ಹೀರಿದ ಬಳಿಕ ಅದು ಅಲ್ಲಿಂದ ಹಾರಿ ಹೋಗಲು ಸಾಧ್ಯವಾಗದೆ ಅದು ತನ್ನ ಮೊಟ್ಟೆಗಳನ್ನು ಅಂಜೂರ ಹಣ್ಣಿನಲ್ಲಿಯೇ ಇಟ್ಟು ಕೊನೆ ಉಸಿರು ಎಳೆಯುತ್ತದೆ.
ಯಾವಾಗ ಮೊಟ್ಟೆಯೊಡೆದು ಮರಿಯಾಗುತ್ತವೆಯೋ ಗಂಡು ಜೇನುನೊಣ ಹಾಗೂ ಹೆಣ್ಣು ಜೇನು ನೋಣ ಅಲ್ಲಿಯೇ ಕೂಡಿಕೆ ಮಾಡುತ್ತವೆ ಮತ್ತು ಅಲ್ಲಿಂದ ಹೊರಬರಲು ಸಣ್ಣದೊಂದು ಸುರಂಗ ಸೃಷ್ಟಿಸಿ ಹೆಣ್ಣು ಜೇನುನೊಣಗಳು ಹಾರಿ ಹೋಗುತ್ತವೆ ಮತ್ತು ಗಂಡು ಜೇನುನೊಣಗಳು ಅಲ್ಲಿಯೇ ಸಾಯುತ್ತವೆ. ಮತ್ತೆ ಗರ್ಭ ಧರಿಸಿದ ಹೆಣ್ಣು ನೊಣಗಳು ಅಂಜೂರ ಹಣ್ಣಿನ ಪರಾಗಸ್ಪರ್ಶಕ್ಕೆ ಹೊರಟು ನಿಲ್ಲುತ್ತವೆ, ಈ ಒಂದು ಚಕ್ರ ಹೀಗೆಯೇ ಸಾಗುತ್ತದೆ.
ಈ ವಿಧಾನದಿಂದ ಹಣ್ಣನ್ನು ಮಾಂಸಾಹಾರ ಹಣ್ಣು ಎಂದು ಗುರುತಿಸಲಾಗುತ್ತದೆ. ಹಾಗಂತ ನೀವು ಅಂಜೂರ ಹಣ್ಣು ತಿನ್ನುವಾಗಲೆಲ್ಲಾ ಮೃತಪಟ್ಟ ಜೇನುನೊಣಗಳ ಹಣ್ಣನ್ನು ತಿನ್ನುತ್ತಿದ್ದೇವೆ ಎಂದು ಭಾವಿಸಬೇಡಿ. ಹಣ್ಣಿನ ಕಿಣ್ವಗಳು ಜೇನುನೊಣಗಳ ದೇಹವನ್ನು ವಿಭಜಿಸಿ ಅದನ್ನು ಪೌಷ್ಟಿಕಾಂಶವಾಗಿ ಪರಿವರ್ತಿಸುತ್ತವೆ.