ಸಂಬಂಧವೇ ಇಲ್ಲದವರು ನೋವು ಮಾಡಿದರೆ ಅವರಿಗೆ ನನ್ನ ಬಗ್ಗೆ ಗೊತ್ತಿಲ್ಲ ಅದಕ್ಕೆ ಏನೇನೋ ಮಾತನಾಡಿ ಹೋಗುತ್ತಾರೆ ಎಂದು ಹೇಳಬಹುದು. ಆದರೆ ನಮ್ಮವರೇ, ನಾವು ಪ್ರೀತಿಸಿದವರೇ ನಮ್ಮನ್ನು ಹರ್ಟ್ ಮಾಡೋದು ಯಾಕೆ?
ಪ್ರೀತಿಯಲ್ಲಿ ನಿಮ್ಮ ಡಿಪೆಂಡೆನ್ಸಿ ಅವರಿಗೆ ನಿಮ್ಮನ್ನು ಹರ್ಟ್ ಮಾಡುವ ಹಕ್ಕಿದೆ ಎನ್ನುವ ಫೀಲಿಂಗ್ ನೀಡುತ್ತದೆ.
ಕೆಲ ಸಮಯದ ನಂತರ ಅವರ ಹಾರ್ಷ್ ಪದಗಳನ್ನು ನೀವು ತೆಗೆದುಕೊಳ್ಳೋದಿಲ್ಲ. ಇಷ್ಟು ದಿನ ಇಲ್ಲದ ಸಿಟ್ಟು ಈಗ್ಯಾಕೆ ಎನ್ನುವ ವಿಷಯ ಅವರಿಗೆ ಇರಿಟೇಟ್ ಆಗಿ ಮತ್ತೆ ಹರ್ಟ್ ಮಾಡುತ್ತಾರೆ.
ನಿಮ್ಮ ಬಗ್ಗೆ ಸಂಪೂರ್ಣ ವಿಷಯ ಗೊತ್ತಿರುವ ಕಾರಣ ನಿಮ್ಮನ್ನು ಹರ್ಟ್ ಮಾಡೋಕೆ ಸಾವಿರಾರು ವಿಷಯಗಳು ಸಿಗುತ್ತವೆ.
ಪ್ರೀತಿಸಿದವ ಮೇಲೆ ಜೋರು ಮಾಡೋದು, ಬೈಯೋದು ಹಕ್ಕು ಎಂದುಕೊಳ್ತಾರೆ. ನಾನು ಬೈಯದೆ ಇನ್ಯಾರು ಬೈತಾರೆ ಎಂದು ಅಂದುಕೊಳ್ತಾರೆ.