Exclusive Visuals | 23 ನಿಮಿಷದಲ್ಲಿ 9 ಉಗ್ರ ನೆಲೆಗಳು ಧ್ವಂಸ.. ‘ಆಪರೇಷನ್ ಸಿಂಧೂರ’ ದಾಳಿ ಹೇಗಿತ್ತು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬೆಳಗಿನ ಜಾವ ನಡೆದ ‘ಆಪರೇಷನ್ ಸಿಂಧೂರ್’ ನ ಭಾಗವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ಶಿಬಿರಗಳ ಮೇಲೆ ನಡೆಸಲಾದ ನಿಖರ ಕ್ಷಿಪಣಿ ದಾಳಿಯ ವೀಡಿಯೊ ತುಣುಕುಗಳನ್ನು ಭಾರತೀಯ ಸೇನೆ ಇದೀಗ ಬಿಡುಗಡೆ ಮಾಡಿದೆ.

ಸವಾಯಿ ನಲ್ಲಾ, ಸರ್ಜಾಲ್, ಮುರಿಡ್ಕೆ, ಕೋಟ್ಲಿ, ಕೊಟ್ಲಿ ಗುಲ್ಪುರ್, ಮೆಹಮೂನಾ ಜೋಯಾ, ಭಿಂಬರ್ ಮತ್ತು ಬಹವಾಲ್ಪುರ್ ಸೇರಿದಂತೆ ಪಾಕಿಸ್ತಾನದ ಒಂಬತ್ತು ಉಗ್ರ ನೆಲೆಗಳನ್ನು ಹೊಡೆದುರುಳಿಸಲಾಗಿದೆ.

‘ಸಿಂದೂರ್’ ಎಂಬ ಹೆಸರಿನ ಕಾರ್ಯಾಚರಣೆಯಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದವು. ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ನಡೆದ ಸ್ಫೋಟಗಳ ವರದಿಗಳು ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಭಾರತೀಯ ಮಿಲಿಟರಿ ಕಾರ್ಯಾಚರಣೆಯ ಪರಿಣಾಮವಾಗಿದೆ ಎಂದು ರಕ್ಷಣಾ ಸಚಿವಾಲಯ ದೃಢಪಡಿಸಿದ ನಂತರ, ಭಾರತೀಯ ಸೇನೆಯು ಎಕ್ಸ್‌ ಪೋಸ್ಟ್‌ನಲ್ಲಿ “ನ್ಯಾಯ ಸಲ್ಲಿಸಲಾಗಿದೆ. ಜೈ ಹಿಂದ್!” ಎಂದು ಹೇಳಿದೆ.

ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ದಾಳಿಯ ವೀಡಿಯೊಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಯಶಸ್ವಿಯಾಗಿ ನಾಶಪಡಿಸಲಾಗಿದೆ ಎಂದು ಪೋಸ್ಟ್ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!