‘ಆಪರೇಷನ್‌ ಸಿಂಧೂರ’ ದಾಳಿಗೆ POK ಛಿದ್ರಛಿದ್ರ.. ಷೇರು ಮಾರುಕಟ್ಟೆಯಲ್ಲಿ ವ್ಯವಹಾರವೇ ಸ್ಥಗಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಗೆ ಪಾಕಿಸ್ತಾನದ ಷೇರು ಮಾರುಕಟ್ಟೆ ಭಾರಿ ಕುಸಿತ ಕಂಡಿದೆ.

ಏರ್‌ಸ್ಟ್ರೈಕ್‌ ನಡೆಸಿದ ಸುದ್ದಿ ಮುಂಜಾನೆ ಪ್ರಕಟವಾಗುತ್ತಿದ್ದಂತೆ ಪಾಕಿಸ್ತಾನದ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಕುಸಿಯಲು ಆರಂಭವಾಯಿತು. ಹೂಡಿಕೆದಾರರು ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದಂತೆ 1,07,007 ಅಂಶಕ್ಕೆ ಕುಸಿಯಿತು. ಇದರಿಂದ ಕೆಲ ಕಾಲ ಷೇರು ಮಾರುಕಟ್ಟೆಯ ವ್ಯವಹಾರ ಸ್ಥಗಿತಗೊಳಿಸಲಾಯಿತು.

ಪಾಕಿಸ್ತಾನ ಷೇರು ಮಾರುಕಟ್ಟೆ ಒಂದೇ ದಿನ ಇಷ್ಟೊಂದು ಅಂಶ ಕುಸಿತವಾಗಿದ್ದು ಇದು ಎರಡನೇ ಬಾರಿ. ಕಳೆದ ತಿಂಗಳು ಟ್ರಂಪ್‌ ತೆರಿಗೆ ಸಮರ ಆರಂಭಿಸಿದಾಗ ಒಂದೇ ದಿನ 8,700 ಅಂಶ ಇಳಿಕೆಯಾದಾಗಲೂ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿತ್ತು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!