ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಪಾಕ್ ಬಿಕ್ಕಟ್ಟು ಹೈದರಾಬಾದ್‌ನ ಪ್ರಸಿದ್ಧ ‘ಕರಾಚಿ ಬೇಕರಿ’ಗೆ ಬಿಸಿ ತುಪ್ಪವಾಗಿದೆ! ಬೇಕರಿಯ ಹೆಸರು ಬದಲಾಯಿಸುವಂತೆ ಆಗ್ರಹಗಳು ಹೆಚ್ಚುತ್ತಿರುವ ನಡುವೆ ಬೇಕರಿ ಮಾಲಿಕರು ಸ್ಪಷ್ಟನೆ ನೀಡಿದ್ದು, ’ನಾವು ಅಪ್ಪಟ ಭಾರತೀಯರು, ಇದು ಅಪ್ಪಟ ಭಾರತದ ಉತ್ಪನ್ನ’ ಎಂದಿದ್ದಾರೆ.
ಇದು ಭಾರತದ ಹೈದರಾಬಾದ್‌ನ ಕಂಪನಿಯಾಗಿದೆ. ದೇಶ ವಿಭಜನೆಯ ಬಳಿಕ ನಮ್ಮ ತಾತ ಖಾನ್‌ಚಂದ್ ರಾಮ್ನಾನಿ ಭಾರತಕ್ಕೆ ಬಂದು ನೆಲೆಸಿದ್ದು, 1953ರಲ್ಲಿ ಕರಾಚಿ ಬೇಕರಿ ಸ್ಥಾಪಿಸಿದ್ದರು. ಈ ಹೆಸರು ನಮ್ಮ ಇತಿಹಾಸದ ಸಂಕೇತವೇ ಹೊರತು ರಾಷ್ಟ್ರೀಯತೆ ಅಲ್ಲ. ದಯವಿಟ್ಟು ನಮಗೆ ಸಹಕರಿಸಿ ಎಂದು ಮಾಲಿಕರಾದ ರಾಜೇಶ್ ರಾಮ್ನಾನಿ ಮತ್ತು ಹರೀಶ್ ರಾಮ್ನಾನಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ಪೊಲೀಸರಿಗೆ ಮನವಿ ಮಾಡಿದ್ದಾರೆ.