ಮೋದಿಜಿ ನಾನು ಯುದ್ಧಕ್ಕೆ ಹೋಗ್ತೀನಿ ಅವಕಾಶ ಕೊಡಿ ಎಂದ ಲಾಲು ಪ್ರಸಾದ್‌ ಯಾದವ್‌ ಪುತ್ರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೋದಿಜಿ ನಾನು ಯುದ್ಧಕ್ಕೆ ಹೋಗ್ತೀನಿ ನನಗೂ ಒಂದು ಅವಕಾಶ ಕೊಡಿ ಎಂದು ಲಾಲು ಪ್ರಸಾದ್‌ ಯಾದವ್‌ ಪುತ್ರ ಪ್ರಧಾನಿಗೆ ಮನವಿ ಮಾಡಿದ್ದಾರೆ.

ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ನಾನು ದೇಶ ಸೇವೆಗೆ ಕೊಡುಗೆ ನೀಡುತ್ತೇನೆ ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ತರಬೇತಿ ವಿಮಾನದಲ್ಲಿ ಕುಳಿತಿರುವ ತಮ್ಮ ಚಿತ್ರದೊಂದಿಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ತೇಜ್ ಪ್ರತಾಪ್ ಯಾದವ್, ತಾನೊಬ್ಬ ಸಮರ್ಥ ಪೈಲಟ್ ಎಂದು ಹೇಳಿದ್ದು, ದೇಶಕ್ಕಾಗಿ ಸೇವೆ ನೀಡಲು ಸಮರ್ಥನಿದ್ದೇನೆ. ಇಂತಹ ಕಠಿಣ ಸಮಯದಲ್ಲಿ ಗಡಿಯಲ್ಲಿ ನಿಯೋಜಿಸಲಾದ ಸೈನಿಕರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ತೇಜ್ ಪ್ರತಾಪ್ ಯಾದವ್, ‘ವಂದೇ ಮಾತರಂ, ಈ ವಿಪತ್ತಿನ ಪರಿಸ್ಥಿತಿಯಲ್ಲಿ ಎಲ್ಲಾ ದೇಶವಾಸಿಗಳು ಒಟ್ಟಾಗಿದ್ದಾರೆ.’ ನಾನು, ತೇಜ್ ಪ್ರತಾಪ್ ಯಾದವ್, ತಂದೆ ಶ್ರೀ ಲಾಲು ಪ್ರಸಾದ್ ಯಾದವ್, ಬಿಹಾರದ ಪಾಟ್ನಾ ನಿವಾಸಿ, ಒಬ್ಬ ವಿಮಾನ ಚಾಲಕನಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸಲು ಸಮರ್ಥನಾಗಿದ್ದೇನೆ’ ಎಂದು ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!