ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದ ಕಾರಣ ಗಾಯಕ ಅರಿಜಿತ್ ಸಿಂಗ್ ಅವರ ಅಬುಧಾಬಿಯಲ್ಲಿ ನಡೆಯಬೇಕಿದ್ದ ಶೋ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಖ್ಯಾತ ಗಾಯಕ ಅರಿಜಿತ್ ಸಿಂಗ್ ರವರ ಮೇ 9ರಂದು ಅಬುಧಾಬಿಯ ಎತಿಹಾದ್ ಅರೀನಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿಮಾಹಿತಿ ಹಂಚಿಕೊಳ್ಳಲಾಗಿದೆ.
ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಗಾಯಕ, . ಪ್ರಿಯ ಅಭಿಮಾನಿಗಳೇ, ಪ್ರಸಕ್ತ ಘಟನೆಗಳನ್ನ ಅನುಸರಿಸಿ ಮೇ 9ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ. ಈಗಾಗಲೇ ಖರೀದಿಸಿದ ಟಿಕೆಟ್ಗಳು ಮುಂದಿನ ದಿನಾಂಕಕ್ಕೂ ಮಾನ್ಯವಾಗಿರುವುದಲ್ಲದೆ, ಹಣ ಹಿಂಪಡೆಯಲು ಬಯಸುವವರು ಮೇ 12 ರಿಂದ ಏಳುದಿನಗಳ ಒಳಗೆ ಸಂಪೂರ್ಣ ಹಣ ಮರುಗಳಿಕೆಗೆ ಅರ್ಜಿ ಹಾಕಬಹುದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.