ಪುರುಷರ ಕೂದಲು ಚಿಕ್ಕದಾಗಿರುವುದರಿಂದ ಅವರು ಪ್ರತಿದಿನ ತಲೆ ಸ್ನಾನವನ್ನು ಸುಲಭವಾಗಿ ಮಾಡಬಹುದು. ಆದರೆ ಮಹಿಳೆಯರು ಪ್ರತಿದಿನ ತಲೆಸ್ನಾನ ಮಾಡುವುದು ಅಸಾಧ್ಯ. ಹೀಗಾಗಿ ವಾರಕ್ಕೆ ಒಂದೆರಡು ಬಾರಿ ಮಾತ್ರ ತೊಳೆಯಲು ಬಯಸುತ್ತಾರೆ. ಆದ್ರೆ ಈ ಕುರಿತು ಸಾಮನ್ಯವಾಗಿ ಮಹಿಳೆಯರ ಮನದಲ್ಲಿ ಗೊಂದಲಗಳಿವೆ ಅದಕ್ಕೆ ಇಲ್ಲಿ ಉತ್ತರವಿದೆ.
ಆರೋಗ್ಯ ವರದಿಯ ಪ್ರಕಾರ, ನಿಮ್ಮ ಕೂದಲು ಎಣ್ಣೆಯುಕ್ತವಾಗಿದ್ದರೆ, ನೀವು ವಾರಕ್ಕೆ 2-3 ಬಾರಿ ಸ್ನಾನ ಮಾಡಬಹುದು.ಮತ್ತೊಂದೆಡೆ, ಒಣ ಕೂದಲನ್ನು ಹೊಂದಿರುವ ಮಹಿಳೆಯರು ವಾರಕ್ಕೆ 1-2 ಬಾರಿ ಮಾತ್ರ ತಮ್ಮ ಕೂದಲನ್ನು ವಾಶ್ ಮಾಡಬೇಕು. ಇದರ ಪರಿಣಾಮದಿಂದಾಗಿ ಕೂದಲಿನ ನೈಸರ್ಗಿಕ ತೇವಾಂಶವು ಹಾಗೆಯೇ ಉಳಿಯುತ್ತದೆ.
ನಿಮ್ಮ ತಲೆಯ ಮೇಲೆ ಅತಿಯಾದ ಬೆವರು ಅಥವಾ ತಲೆಹೊಟ್ಟು ಸಮಸ್ಯೆ ಇದ್ದರೆ, ವಾರಕ್ಕೆ ಎರಡು ಅಥವಾ ಮೂರು ಬಾರಿ ನಿಮ್ಮ ಕೂದಲನ್ನು ತೊಳೆಯುವುದು ಉತ್ತಮ. ಆದರೆ, ನೆತ್ತಿಯು ಸಾಮಾನ್ಯವಾಗಿದ್ದರೆ, ವಾರಕ್ಕೆ ಎರಡು ಬಾರಿ ತೊಳೆದರೆ ಸಾಕು.
ನೀವು ಪ್ರತಿದಿನ ವ್ಯಾಯಾಮ ಮಾಡುವವರಾಗಿದ್ದರೆ, ಅದರಲ್ಲೂ ಬೇಸಿಗೆಯಲ್ಲಿ ನಿಮಗೆ ಹೆಚ್ಚು ಬೆವರು ಬರುತ್ತದೆ. ಇಂತಹ ವೇಳೆ ನೀವು ದಿನ ಶಾಂಪೂ ಬಳಸುವ ಬದಲು ನೀರಿನಿಂದ ವಾಶ್ ಮಾಡುವುದು ಅಥವಾ ಒಣ ಶಾಂಪೂ ಬಳಸುವುದು ಉತ್ತಮ ಆಯ್ಕೆ.