September 27, 2026
Sunday, September 27, 2026
spot_img

ಭಾರತದ ವಿರುದ್ಧ ಮ್ಯಾಚ್‌ ಆಡೋದಿಲ್ಲ ಅಂದ್ರೆ ಪಾಕ್‌ಗೆ 200 ಕೋಟಿ ನಷ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕ್‌ ಪಂದ್ಯವಾಡದೇ ಇದ್ದರೆ ಎರಡು ತಂಡಗಳಿಗೆ 200 ಕೋಟಿ ರೂ. ಆದಾಯ ನಷ್ಟವಾಗುವ ಸಾಧ್ಯತೆಯಿದೆ.

ಶ್ರೀಲಂಕಾಗೆ ನಮ್ಮ ತಂಡ ಆಗಮಿಸಿದ್ದರೂ ಭಾರತದ ವಿರುದ್ಧ ಪಂದ್ಯ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಇದು ಪಾಕ್‌ ಸರ್ಕಾರದ ನಿರ್ಧಾರವಾಗಿದ್ದು ಅಧಿಕೃತವಾಗಿ ಪಿಸಿಬಿ ಐಸಿಸಿಗೆ ಈ ವಿಚಾರವನ್ನು ತಿಳಿಸಿಲ್ಲ.

ಒಂದು ವೇಳೆ ಪಂದ್ಯ ಆಡದೇ ಇದ್ದರೆ ಪಾಕಿಸ್ತಾನ ಕ್ರೀಡಾ, ಆರ್ಥಿಕ ಮತ್ತು ಆಡಳಿತಾತ್ಮಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಎರಡು ತಂಡಗಳು 200 ಕೋಟಿ ರೂ. ಆದಾಯವನ್ನು ಕಳೆದುಕೊಳ್ಳಲಿದೆ ಎಂದು ಮಾಧ್ಯಮ ವರದಿ ಮಾಡಿದೆ. ಅಷ್ಟೇ ಅಲ್ಲದೇ ಪಾಕ್‌ ಗ್ರೂಪ್‌ ಹಂತದಲ್ಲೇ ಹೊರ ಬೀಳುವ ಸಾಧ್ಯತೆಯಿದೆ.

ಭಾರತದ ವಿರುದ್ಧ ಪಂದ್ಯವಾಡಲ್ಲ ಎಂದಿರುವ ಪಾಕಿಸ್ತಾನಕ್ಕೆ ಐಸಿಸಿ ಬಿಸಿ ಮುಟ್ಟಿಸಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ ಪಾಕ್‌ ಸರ್ಕಾರದ ನಿರ್ಧಾರವನ್ನು ವಿರೋಧಿಸಿದೆ.

Must Read