ಕೆಲವೊಮ್ಮೆ ಫ್ರಿಡ್ಜ್ ಓಪನ್ ಮಾಡಿದ ಕ್ಷಣಕ್ಕೇ ಮೂಗಿಗೆ ರಪ್ ಅಂತ ವಾಸನೆ ಬರುತ್ತೆ ಅಲ್ವಾ? “ಇವತ್ತು ಅಲ್ಲ, ನಾಳೆ ಕ್ಲೀನ್ ಮಾಡ್ತೀನಿ” ಅಂತ ಬಿಡ್ತಾ ಬಿಡ್ತಾ ಅದೇ ವಾಸನೆ ದಿನೇ ದಿನೇ ಜಾಸ್ತಿ ಆಗುತ್ತೆ. ಆದರೆ ಪ್ರತಿಬಾರಿ ಫ್ರಿಡ್ಜ್ ಖಾಲಿ ಮಾಡಿ, ತೊಳೆಯೋಕೆ ಸಮಯ ಎಲ್ಲಿದೆ? ಚಿಂತೆ ಬೇಡ. ಕ್ಲೀನ್ ಮಾಡದೇನೇ ಗಬ್ಬು ವಾಸನೆ ಕಡಿಮೆ ಮಾಡೋ ಕೆಲ ಸ್ಮಾರ್ಟ್ ಕಿಚನ್ ಟಿಪ್ಸ್ ಇಲ್ಲಿವೆ.
ನಿಂಬೆ ಮತ್ತು ಲವಂಗದ ಮ್ಯಾಜಿಕ್
ಒಂದು ನಿಂಬೆ ಹಣ್ಣನ್ನು ಅರ್ಧಕ್ಕೆ ಕತ್ತರಿಸಿ, ಅದರಲ್ಲಿ 4–5 ಲವಂಗ ತೂರಿಸಿ. ಇದನ್ನು ಫ್ರಿಡ್ಜ್‌ನ ಒಂದು ಮೂಲೆಯಲ್ಲಿ ಇಡಿ. ನೈಸರ್ಗಿಕ Air Freshener ಆಗಿ ಕೆಲಸ ಮಾಡುತ್ತದೆ, ಕೆಟ್ಟ ವಾಸನೆ ಹೀರಿಕೊಂಡು ಫ್ರೆಶ್ ವಾಸನೆ ಕೊಡುತ್ತದೆ.
ಕಾಫಿ ಪೌಡರ್ ಕಪ್
ಕಾಫಿ ಪೌಡರ್ ಇದ್ದರೆ ಸಾಕು. ಒಂದು ಚಿಕ್ಕ ಬೌಲ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡಿ. ಕಾಫಿ ವಾಸನೆ ಹೀರಿಕೊಳ್ಳುವ ಗುಣ ಹೊಂದಿದ್ದು, ಎರಡು ದಿನಗಳಲ್ಲಿ ಬದಲಾವಣೆ ನಿಮಗೆ ಗೊತ್ತಾಗುತ್ತೆ.
ಬೇಕಿಂಗ್ ಸೋಡಾ – ಹಳೆಯದಾದರೂ ಗೋಲ್ಡನ್ ಟಿಪ್
ಒಪನ್ ಕಪ್‌ನಲ್ಲಿ ಬೇಕಿಂಗ್ ಸೋಡಾ ಇಡಿ. ತಿಂಗಳಿಗೆ ಒಮ್ಮೆ ಬದಲಿಸಿದರೆ ಸಾಕು. ಇದು ವಾಸನೆ ಮಾತ್ರವಲ್ಲ, ಬ್ಯಾಕ್ಟೀರಿಯಾ ವಾಸನೆಯನ್ನು ಕೂಡ ಕಂಟ್ರೋಲ್ ಮಾಡುತ್ತದೆ.
ಇದನ್ನೂ ಓದಿ:
ಬ್ರೆಡ್ ಸ್ಲೈಸ್ ಟ್ರಿಕ್
ಒಂದು ಒಣ ಬ್ರೆಡ್ ಸ್ಲೈಸ್ ಅನ್ನು ಫ್ರಿಡ್ಜ್‌ನಲ್ಲಿ ಇಟ್ಟು ನೋಡಿ. ಅಚ್ಚರಿಯೆಂದರೆ, ಇದು ಸುತ್ತಲಿನ ಕೆಟ್ಟ ವಾಸನೆಯನ್ನು ಬೇಗನೆ ಹೀರಿಕೊಳ್ಳುತ್ತದೆ.
ಅಗರ್‌ಬತ್ತಿ ಅಲ್ಲ, ಅಜ್ವೈನ್ ಬೇಕು!
ಒಂದು ಚಿಕ್ಕ ಬಟ್ಟಲಿನಲ್ಲಿ ಅಜ್ವೈನ್ (ಓಮ) ಹಾಕಿ ಇಟ್ಟರೆ, ಅದು ತೇವ ಮತ್ತು ದುರ್ವಾಸನೆ ಎರಡನ್ನೂ ಕಡಿಮೆ ಮಾಡುತ್ತದೆ.
ಸಣ್ಣ ಎಚ್ಚರಿಕೆ
ಈ ಟಿಪ್ಸ್ ವಾಸನೆ ಕಡಿಮೆ ಮಾಡುತ್ತವೆ, ಆದರೆ ಹಳೆಯ ಆಹಾರ ಪದಾರ್ಥಗಳನ್ನು ತಿಂಗಳಿಗೆ ಒಮ್ಮೆ ಚೆಕ್ ಮಾಡೋ ಅಭ್ಯಾಸ ಇದ್ದರೆ ಫ್ರಿಡ್ಜ್ ಯಾವತ್ತೂ ಫ್ರೆಶ್.
ಕ್ಲೀನ್ ಮಾಡೋಕೆ ಸಮಯ ಇಲ್ಲ ಅಂದ್ರೆ, ಸ್ಮಾರ್ಟ್ ಆಗಿ ಮ್ಯಾನೇಜ್ ಮಾಡೋದೇ ಬೆಸ್ಟ್. ನಿಮ್ಮ ಫ್ರಿಡ್ಜ್, ನಿಮ್ಮ ರೂಲ್ಸ್!



