November 3, 2026
Tuesday, November 3, 2026
spot_img

ವಿಚಿತ್ರ ಹೇರ್‌ಸ್ಟೈಲ್‌ಗೆ ಸಚಿವೆಯ ಕೆಂಗಣ್ಣು: ಶಾಲಾ ಮಕ್ಕಳ ತಲೆ ಬೋಳಿಸಲು ಸಲಹೆ

ಹೊಸದಿಗಂತ ವರದಿ ವಿರುಧುನಗರ:

ಚಿತ್ರ -ವಿಚಿತ್ರ ಕೇಶವಿನ್ಯಾಸ ಮಾಡಿಕೊಳ್ಳುವ ಶಾಲಾ ವಿದ್ಯಾರ್ಥಿಗಳ ತಲೆ ಬೋಳಿಸಿ ಎಂದು ತಮಿಳುನಾಡು ಸಚಿವೆ ಜಗದೀಶ್ವರಿ ಹೇಳಿದ್ದಾರೆ.

ವಿರುಧುನಗರ ಜಿಲ್ಲೆಯ ಕರಿಯಾಪಟ್ಟಿ ಬಳಿಯ ಆಯನ್ ರೆಡ್ಡಿಪಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗಡಿ ಗೋಡೆಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡುವ ವೇಳೆ, ಮಕ್ಕಳು ಈ ರೀತಿ ವಿಕೃತವಾಗಿ ಹೇರ್‌ಸ್ಟೈಲ್ ಮಾಡುತ್ತಿರುವುದು ಮತ್ತು ಮನೆಯಲ್ಲಿನ ಹಿರಿಯರೇ ಇದಕ್ಕೆ ಅವಕಾಶ ನೀಡುವ ಮೂಲಕ ಮನೆಯಿಂದಲೇ ಅಶಿಸ್ತು ಆರಂಭಗೊಳ್ಳುತ್ತಿದೆ ಎಂಬುದನ್ನು ಅರಿಯಬೇಕಾಗಿದ್ದು, ಇದನ್ನು ಸರಿಪಡಿಸಿಕೊಳ್ಳಬೇಕೆಂದು ಹೆತ್ತವರಿಗೆ ಕರೆ ನೀಡಿದ್ದಾರೆ.

ವಿದ್ಯಾರ್ಥಿಗಳ ಕೇಶವಿನ್ಯಾಸದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಶಾಲಾ ಮಕ್ಕಳ ಇಂತಹ ವಿಲಕ್ಷಣ ಕೇಶವಿನ್ಯಾಸ ಅವರನ್ನು ಪುಂಡರಂತೆ, ದರೋಡೆಕೋರರಂತೆ ಕಾಣುವ ಹಾಗೆ ಮಾಡುತ್ತದೆ. ಸೂಕ್ತವಲ್ಲದ ಕೇಶವಿನ್ಯಾಸದೊಂದಿಗೆ ಬಂದ ವಿದ್ಯಾರ್ಥಿಗಳ ತಲೆಯನ್ನು ಸಂಪೂರ್ಣವಾಗಿ ಬೋಳಿಸಿ, ಅದರಲ್ಲಿ ಯಾವುದೇ ತಪ್ಪಿಲ್ಲ. ಅವರನ್ನು ನನ್ನ ಸ್ವಂತ ಮಕ್ಕಳೆಂದು ಪರಿಗಣಿಸಿ ನಾನು ಇದನ್ನು ಹೇಳುತ್ತಿದ್ದೇನೆ ಎಂದರು.ಅವರ ಹೇಳಿಕೆಯನ್ನು ಈಗ ವಿವಾದವನ್ನಾಗಿ ಮಾಡಲಾಗಿದೆ.

ಅಂತಹ ಕೇಶವಿನ್ಯಾಸವನ್ನು ಪೋಷಕರು ಯಾಕೆ ಅನುಮತಿಸುತ್ತಿದ್ದಾರೆ? ಹೀಗೆಲ್ಲ ಬೇಕಾಬಿಟ್ಟಿಯಾಗಿ ಇರಲು ಅವಕಾಶ ಮಾಡಿಕೊಡುವುದರಿಂದ ಅವರಲ್ಲಿ ಅಶಿಸ್ತು ಬೆಳೆಯಲು ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ? ಅಶಿಸ್ತು ಹೆಚ್ಚಾಗಿ ಮನೆಯಿಂದಲೇ ಪ್ರಾರಂಭವಾಗುತ್ತದೆ. ಇಂತಹ ಪ್ರವೃತ್ತಿಗೆ ಅವಕಾಶ ನೀಡುವ ಮೂಲಕ ಅವರೇ ತಪ್ಪುಗಳನ್ನು ಸೃಷ್ಟಿಸುತ್ತಿದ್ದಾರೆ ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು ಎಂದು ಸಚಿವರು ಕಳಕಳಿ ವ್ಯಕ್ತಪಡಿಸಿದರು.

ಆದಾಗ್ಯೂ ಇದೀಗ ಅವರ ಹೇಳಿಕೆಯನ್ನು ರಾಜಕೀಯ ವಿವಾದವನ್ನಾಗಿ ಮಾಡಲಾಗಿದೆ.

Must Read

Skip to toolbar