ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಜಗಬುಡಿ ನದಿಗೆ ಕಾರು ಉರುಳಿ ಬಿದ್ದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ಮುಂಬೈ-ಗೋವಾ ಹೆದ್ದಾರಿಯಲ್ಲಿ ಮುಂಬೈನಿಂದ ದೇವ್ರುಖ್‌ಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರಿನ ಚಾಲಕನಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗ್ಗೆ 5 ಗಂಟೆ ಸುಮಾರಿಗೆ ಜಗ್ಬುಡಿ ನದಿ ಸೇತುವೆಯಿಂದ ನೇರವಾಗಿ 100 ಅಡಿ ಕೆಳಗೆ ಕಾರು ಬಿದ್ದಾಗ ಅಪಘಾತ ಸಂಭವಿಸಿದೆ. ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆತ್ತಿ, ನಂತರ ಶವಗಳನ್ನು ವಾಹನದಿಂದ ಹೊರತೆಗೆಯಲಾಯಿತು.
ಈ ಘಟನೆಯಲ್ಲಿ ಕರ್ನಾಟಕದ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆ ಆಂಧ್ರದ ಅನ್ನಮಯ್ಯ ಜಿಲ್ಲೆಯ ಕುರಪ್ಪಲ್ಲಿ ಗ್ರಾಮದ ಬಳಿ ನಡೆದಿದೆ. ಚಿಂತಾಮಣಿ ತಾಲೂಕಿನ ಮುತ್ತಕದಲ್ಲಿ ಗ್ರಾಮದ ನಿವಾಸಿಗಳಾದ ಲೊಕೇಶ(34), ಚಂದನಹಳ್ಳಿ ಗ್ರಾಮದ ಶಿವಾನಂದ, ಕೋಲಾರ ಜಿಲ್ಲೆಯ ಸುಗಟೂರು ಗ್ರಾಮದ ಚಲಪತಿ ಮೃತರು. ಇನ್ನು ಈ ಘಟನೆಯಲ್ಲಿ ಇಬ್ಬರು ಪ್ರಾಣಾಪಾದಿಂದ ಪಾರಾಗಿದ್ದಾರೆ.
ಸೋಮವಾರ ರಾತ್ರಿ ಮುಂಬೈನ ನಲಸೋಪರಾ ಪೂರ್ವದಲ್ಲಿರುವ ತುಲಿಂಜ್ ಪೊಲೀಸ್ ಠಾಣೆಯ ಮುಂದೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆಂಬ್ಯುಲೆನ್ಸ್ ಈ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿತ್ತು, ಸೈರನ್ ಹಾಕಿದ್ದರೂ ದಾರಿಯಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಆಂಬ್ಯುಲೆನ್ಸ್ ಸ್ವಲ್ಪ ಸಮಯದವರೆಗೆ ರಸ್ತೆಯಲ್ಲಿಯೇ ಅಲ್ಲಿಯೇ ಇರಬೇಕಾಯಿತು.