February 3, 2026
Tuesday, February 3, 2026
spot_img

T20 World Cup Warm-up: ಜಗದೀಸನ್ ಶತಕದ ಅಬ್ಬರ: ಯುಎಸ್‌ಎ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ಗೆ ಸಿದ್ಧತೆಯ ಭಾಗವಾಗಿ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡ ಯುಎಸ್‌ಎ ವಿರುದ್ಧ ಆತ್ಮವಿಶ್ವಾಸಭರಿತ ಪ್ರದರ್ಶನ ನೀಡಿ ಭರ್ಜರಿ ಜಯ ದಾಖಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ, ಬಲಿಷ್ಠ ಮೊತ್ತ ಕಲೆಹಾಕಿ ಎದುರಾಳಿಗೆ ಕಠಿಣ ಸವಾಲು ನೀಡಿತು.

ಆರಂಭದಲ್ಲಿ ಪ್ರಿಯಾಂಶ್ ಆರ್ಯ ಮತ್ತು ನಾರಾಯಣ್ ಜಗದೀಸನ್ ತಂಡಕ್ಕೆ ವೇಗದ ಆರಂಭ ಒದಗಿಸಿದರು. ಪ್ರಿಯಾಂಶ್ ಔಟಾದ ಬಳಿಕ ಜಗದೀಸನ್ ಆಕ್ರಮಣಕಾರಿ ಆಟ ಮುಂದುವರಿಸಿ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದರು. ಅವರು 105 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದರು. ಮೂರನೇ ಕ್ರಮಾಂಕದಲ್ಲಿ ಬಂದ ತಿಲಕ್ ವರ್ಮಾ ಚುರುಕಿನ ಬ್ಯಾಟಿಂಗ್ ಮೂಲಕ 38 ರನ್ ಸೇರಿಸಿ ತಮ್ಮ ಫಿಟ್‌ನೆಸ್ ಸಾಬೀತುಪಡಿಸಿದರು.

ಇದನ್ನೂ ಓದಿ:

ನಾಯಕ ಆಯುಷ್ ಬದೋನಿ ಅಂತಿಮ ಓವರ್‌ಗಳಲ್ಲಿ ಸ್ಫೋಟಕ ಆಟವಾಡಿ ಅಜೇಯ 60 ರನ್‌ಗಳನ್ನು ದಾಖಲಿಸಿದರು. ಇದರೊಂದಿಗೆ ಭಾರತ ಎ 20 ಓವರ್‌ಗಳಲ್ಲಿ 238 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಯುಎಸ್‌ಎ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಆಂಡ್ರಿಸ್ ಗೌಸ್, ಸಂಜಯ್ ಕೃಷ್ಣಮೂರ್ತಿ ಮತ್ತು ಇತರರ ಪ್ರಯತ್ನಗಳಿದ್ದರೂ, ತಂಡ 19.4 ಓವರ್‌ಗಳಲ್ಲಿ 200 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ಭಾರತ ಎ ತಂಡ 38 ರನ್‌ಗಳ ಜಯದೊಂದಿಗೆ ಮೇಲುಗೈ ಸಾಧಿಸಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !