April 16, 2026
Thursday, April 16, 2026
spot_img

ಏಳು ಸಾವಿರ ಆಸ್ತಿಗಳ ಹರಾಜಿಗೆ ಮುಂದಾಗಿದೆ ಜಿಬಿಎ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತೆರಿಗೆ ಪಾವತಿ ಮಾಡದ ಮಾಲೀಕರ ಒಟ್ಟಾರೆ ಏಳು ಸಾವಿರ ಆಸ್ತಿಗಳನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹರಾಜಿಗೆ ಇಟ್ಟಿದೆ.

ಜಿಬಿಎ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಲ್ಲಿ ಒಟ್ಟು 437 ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ತೆರಿಗೆ ಬಾಕಿಯಿದೆ. ತೆರಿಗೆ ಪಾವತಿಸದ್ದಕ್ಕೆ ಆಸ್ತಿ ಮಾಲೀಕರಿಗೆ ಈಗಾಗಲೇ ನೊಟೀಸ್‌ ಜಾರಿ ಮಾಡಲಾಗಿತ್ತು. ಆದರೂ ತೆರಿಗೆ ಪಾವತಿ ಮಾಡಿರಲಿಲ್ಲ. ಹೀಗಾಗಿ ಜಪ್ತಿ ಮಾಡುವ ಆದೇಶ ಪ್ರಕಟವಾಗಿದೆ.

ಜಪ್ತಿ ಆದೇಶ ಕೊಟ್ಟ ಮೇಲೆಯೂ ತೆರಿಗೆ ಪಾವತಿ ಮಾಡಿಲ್ಲ ಎಂದಾದರೆ ಇದೇ ಫೆಬ್ರವರಿ 17ರಂದು ಜಂಟಿ ಆಯುಕ್ತರ ಕಚೇರಿಗಳಲ್ಲಿ ಈ ಜಾಗಗಳಲ್ಲಿ ಹರಾಜು ಹಾಕಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !