ಹೊಸದಿಗಂತ ವರದಿ ಹಾಸನ :
ಮಳೆಯ ನಡುವೆಯೂ ಕಾಡಾನೆಗಳ ಉಪಟಳ ಮುಂದುವರೆದಿದ್ದು ಕಾಡಾನೆ ದಾಳಿಗೆ ಸಕಲೇಶಪುರ ತಾಲ್ಲೂಕಿನ, ಕಟ್ಟೆಮನೆ, ಮರ್ಜನಹಳ್ಳಿ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಎರಡು ಸಲಗಗಳಿಂದ ಕಾಫಿ, ಬಾಳೆ, ಅಡಿಕೆ ಗಿಡಗಳು ನೆಲಕ್ಕಚ್ಚಿವೆ. ವಾಸದ ಮನೆಗಳ ಸಮೀಪವೇ ಇರುವ ಕಾಡಾನೆಗಳ ಸ್ಥಳಕ್ಕೆ ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ದೌಡಾಯಿಸಿದ್ದಾರೆ. ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡುತ್ತಿದ್ದಾರೆ.
ಮಲೆನಾಡ ಭಾಗದಲ್ಲಿ ಒಂದೆಡೆ ಭಾರಿ ಮಳೆಯಿಂದ ಅನೇಕ ಅವಘಡಗಳು ಸಂಭವಿಸಿದರೆ, ಇನ್ನೊಂದೆಡೆ ಕಾಡಾನೆ ಉಪಟಳ ಮಾತ ಕಳೆದ ಎರಡು ದಶಕಗಳಿಂದ ತಪ್ಪದ ಗೋಳಾಗಿದೆ.