ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ ಕಂಡುಬಂದಿದೆ. ರನ್‌ವೇ ಪ್ರದೇಶದಲ್ಲಿ ಬೀದಿನಾಯಿಗಳು ಕಾಣಿಸಿಕೊಂಡಿವೆ.
ರನ್‌ವೇಗೆ ಎರಡು ಬೀದಿನಾಯಿಗಳು ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೀಗ ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟು ನಾಯಿಗಳನ್ನು ಸೆರೆಹಿಡಿದು ಹೊರಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕಲುಷಿತ ಗಾಳಿಯ ಎಚ್ಚರಿಕೆ ಕರೆಗಂಟೆ: ಹಲವು ನಗರಗಳಲ್ಲಿ ಅಪಾಯದ ಮಟ್ಟಕ್ಕೆ ಸಮೀಪಿಸುತ್ತಿದೆ AQI
ಟರ್ಮಿನಲ್–2ಕ್ಕೆ ಸಂಬಂಧಿಸಿದ ಹೊಸ ರನ್‌ವೇ ಪ್ರದೇಶಕ್ಕೆ ನುಗ್ಗಿದ ಬೀದಿ ನಾಯಿಗಳು, ಅಲ್ಲಿದ್ದ ವಿಮಾನಗಳ ಸಮೀಪದಲ್ಲೇ ಓಡಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಇದರಿಂದ ಕೆಲ ಸಮಯ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಯಾಗಿದೆ.



