ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಶಾಪಿಂಗ್ ಪ್ರಿಯರಿಗೆ ಮಲ್ಲೇಶ್ವರಂ ನಗರ ಅಚ್ಚುಮೆಚ್ಚು, ಬೆಂಗಳೂರು ಅತಿಯಾಗಿ ಬ್ಯುಸಿಯಾಗಿದೆ, ಇದರಲ್ಲಿ ಲೈಫ್ ಕಾಣಿಸುತ್ತಿಲ್ಲ ಎಂದು ಬೇಸರಿಸಿಕೊಲ್ಳುವವರು ಆಗಾಗ ಮಲ್ಲೇಶ್ವರಂಗೆ ಹೋಗಿ ಬರುತ್ತಾರೆ. ಇವರೆಲ್ಲರ ಮೊದಲ ಸಮಸ್ಯೆ ಎಂದರೆ ಇಡೀ ನಗರದಲ್ಲಿ ಸರಿಯಾದ ಪಾರ್ಕಿಂಗ್ ಸಿಗದೇ ಇರುವುದು.
ಆದರೆ ಈಗ ಇದಕ್ಕೂ ಉತ್ತರ ಸಿಕ್ಕಿದ್ದು, ಕೆಲವೇ ದಿನಗಳಲ್ಲಿ ಮಲ್ಲೇಶ್ವರಂನಲ್ಲಿ ಪೇ&ಪಾರ್ಕಿಂಗ್ ಲಭ್ಯವಾಗಲಿದೆ. ಮಲ್ಲೇಶ್ವರದ ಏಳು ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ಶುರು ಮಾಡಲು ಶೀಘ್ರದಲ್ಲೇ ಆರಂಭಿಸಲು ಟೆಂಡರ್ ಆಹ್ವಾನಿಸಿದೆ.
ಇದನ್ನೂ ಓದಿ: ಯಮನಂತೆ ಬಂದ ಬೈಕ್! ದ್ವಿಚಕ್ರ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು
ಪ್ರತಿ ಗಂಟೆಗೆ ನಾಲ್ಕು ಚಕ್ರದ ವಾಹನಗಳಿಗೆ 30 ರೂಪಾಯಿ ದ್ವಿಚಕ್ರ ವಾಹನಗಳಿಗೆ 15 ರೂ. ದರವನ್ನು ನಿಗದಿ ಮಾಡಲಾಗಿದೆ. ಪೇ ಅಂಡ್ ಪಾರ್ಕಿಂಗ್‌ಗೆ ದಿನದ ಪಾಸ್ ಕೂಡ ವ್ಯವಸ್ಥೆ ಮಾಡುವುದಕ್ಕೂ ಪ್ಲ್ಯಾನ್ ಮಾಡಲಾಗುತ್ತಿದೆ.
ಸಂಪಿಗೆ ರಸ್ತೆ, ಮಲ್ಲೇಶ್ವರಂ 18ನೇ ರಸ್ತೆ, ಮಲ್ಲೇಶ್ವರಂ 15ನೇ ರಸ್ತೆ, ಮಲ್ಲೇಶ್ವರಂ 11ನೇ ರಸ್ತೆ, ಮಲ್ಲೇಶ್ವರಂ 8 ನೇ ರಸ್ತೆ, ಮಲ್ಲೇಶ್ವರಂ 4ನೇ ಮುಖ್ಯ ರಸ್ತೆ, ಮಲ್ಲೇಶ್ವರಂ 2ನೇ ಮುಖ್ಯ ರಸ್ತೆಯಲ್ಲಿ ಆರಂಭದಲ್ಲಿ ಜಾರಿಗೆ ಬರಲಿದೆ.



